ತುಮಕೂರು :– ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಕದ್ದ ಮಾಲನ್ನು ವಶಕ್ಕೆ ಪಡೆದಿದ್ದಾರೆ. ತುಮಕೂರು ತಿಮ್ಮನಪಾಳ್ಯದ ಪ್ರಸನ್ನಕುಮಾರ್(40) ಬಂಧಿತ ಆರೋಪಿ. ಬಂಧಿತನಿಂದ ಆರು ಲಕ್ಷ ಮೌಲ್ಯದ 700ರಿಂದ 800 ಕೆಜಿಯಷ್ಟು ಒಂಬತ್ತು ಚೀಲ ಒಣಗಿದ ಅಡಿಕೆ, ಕೃತ್ಯಕ್ಕೆ ಬಳಸಿದ್ದ ವಾಹನ ವಶಕ್ಕೆ ಪಡೆದಿದ್ದಾರೆ.
ತುಮಕೂರು ತಾಲೂಕು ಗೂಳೂರು ಹೋಬಳಿಯ ಕೋಡಿಹಳ್ಳಿಯ ಅಡಿಕೆ ವ್ಯಾಪಾರಸ್ಥರಾಗಿದ್ದ ಶೆಟ್ಟಳಯ್ಯ ಮತ್ತು ಮೃತ್ಯುಂಜಯ ಕುಮಾರ್ ಅಡಿಕೆ ಕಳವಾಗಿದ್ದ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 28ರಂದು ದೂರು ದಾಖಲಿಸಿದ್ದರು.
ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.