ಬೆಂಗಳೂರು : ಉಪನಗರ ರೈಲು ಯೋಜನೆಗೆ 306 ರೈಲು ಕೋಚ್ಗಳ ಖರೀದಿಗೆ ರಾಜ್ಯದ ಪಾಲು 2,135 ಕೋಟಿ ರೂಪಾಯಿ ಒದಗಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ ಅವರು, ಮುಂದಿನ 5 ವರ್ಷಗಳಲ್ಲಿ 306 ಕೋಚ್ಗಳನ್ನು ಖರೀದಿ ಮಾಡಲಿ ಈ ಮೊತ್ತವನ್ನು ಕೆಆರ್ಐಡಿಇಗೆ ಒದಗಿಸಲಾಗುತ್ತದೆ. ಒಟ್ಟು ಈ ಯೋಜನೆಗೆ ಅಂದಾಜು ಮೊತ್ತ 4,300 ಕೋಟಿ ರೂಪಾಯಿ ಆಗಿದ್ದು, ರಾಜ್ಯದಿಂದ 2,135 ಕೋಟಿ ರೂಪಾಯಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.