ಬಿಜೆಪಿ ಶೋಕಾಸ್ ನೋಟಿಸ್ಗೆ ಶಾಸಕ ಬಸನಗೌಡ ಯತ್ನಾಳ್ ಖಡಕ್ ಪ್ರತಿಕ್ರಿಯೆ

ಬಿಜೆಪಿ ಶೋಕಾಸ್ ನೋಟಿಸ್ಗೆ ಶಾಸಕ ಬಸನಗೌಡ ಯತ್ನಾಳ್ ಖಡಕ್ ಪ್ರತಿಕ್ರಿಯೆ

ಬೆಂಗಳೂರು : ಕುಟುಂಬ ರಾಜಕಾರಣ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಸೋಮವಾರ ಶಾಕ್ ನೀಡಿದೆ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದ ಯತ್ನಾಳ್ ಅವರಿಗೆ ಸಮಿತಿಯು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅದಕ್ಕೀಗ ಯತ್ನಾಳ್ ಅವರು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಶೋಕಾಸ್ ನೋಟಿಸ್ ಸಮೇತ ಪೋಸ್ಟ್ ಮಾಡಿರುವ ಅವರು, ಶೀಘ್ರದಲ್ಲೇ ನೋಟಿಸ್ಗೆ ಉತ್ತರ ಕೊಡುವೆ ಎಂದಿದ್ದಾರೆ. ”ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್ಗೆ ಉತ್ತರ ನೀಡುತ್ತೇನೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಪ್ರಸ್ತುತಪಡಿಸುತ್ತೇನೆ ಎಂದು ಬಹಿರಂಗವಾಗಿ ಗುಡುಗಿದ್ದಾರೆ.

ಹಿಂದುತ್ವದ ಹೋರಾಟ, ಭ್ರಷ್ಟಾಚಾರದ ವಿರೋಧ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ರಾಜವಂಶದ ರಾಜಕೀಯಕ್ಕೆ ನನ್ನ ಬದ್ಧತೆ ಅಚಲವಾಗಿ ಉಳಿಯುತ್ತದೆ ಎಂದು ಹೇಳುವ ಮೂಲಕ ಇದ್ಯಾವುದಕ್ಕೆ ಜಗ್ಗುವುದಿಲ್ಲ. ನನ್ನ ಹೋರಾಟ ಜನಪರ ಎಂಬ ಸಂದೇಶ ರವಾನಿಸಿದ್ದಾರೆ. Yatnal: ಇಂದು ದೆಹಲಿಗೆ ಯತ್ನಾಳ್ ನಿಯೋ

ಯತ್ನಾಳ್ ನಿಯಂತ್ರಣಕ್ಕೆ ಮುಂದಾದ ಬಿಜೆಪಿ ಹಿಂದೂತ್ವ ಪರ ಸದಾ ಧ್ವನಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕುಟುಂಬ ರಾಜಕಾರಣದ ಕಡು ವಿರೋಧಿಯಾಗಿದ್ದಾರೆ. ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಮೇಲೆ ಅವರ ವಾಗ್ದಾಳಿ ಮತ್ತೊಂದು ಹಂತಕ್ಕೆ ಏರಿತು. ಅಲ್ಲಿಂದ ಹಿಡಿದು ಮೊನ್ನೆಯ ಉಪ ಚುನಾವಣೆ ಸೋಲಿಗೆ ವಿಜಯೇಂದ್ರ ಕಾರಣ ಎನ್ನುವವರೆಗೂ ಅವರು ಟೀಕಿಸಿದರು.

ಅಸಮಾಧಾನ, ಏಕ ಪಕ್ಷೀಯ ಧೋರಣೆ, ಕುಟುಂಬ ರಾಜಕಾರಣ, ದುರಾಡಳಿತದ ವಿರುದ್ಧ ಬಹಿರಂತವಾಗಿ ಮತ್ತು ನೇರವಾಗಿಯೇ ಮಾತನಾಡುವ ಅವರು ಕೆಲವೊಮ್ಮೆ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡಿದ್ದಾರೆ. ಇದು ಎದುರು ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರವಾಗಿಯು ಬಳಕೆ ಆಗಿದ್ದುಂಟು. ಕುಟುಂಬ ರಾಜಕಾರಣ, ಅಪ್ಪ ಮಕ್ಕಳ ರಾಜಕಾರಣ, ಬಣ ರಾಜಕೀಯ ವಿರುದ್ಧ ಮಾತನಾಡುತ್ತಿರುವ ಅವರ ವಿರುದ್ಧ ಬಿ.ವೈ.ವಿಜಯೇಂದ್ರ ಅವರು ವಾಗ್ದಳಿ ನಡೆಸಿದ್ದಾರೆ. ಬಿಜೆಪಿಯಲ್ಲಿ ಬೀದಿ ಜಗಳ ಶುರುವಾಗಿದೆ. ಇದಕ್ಕೆ ಕಡಿವಾಣ ಹಾಕಲು ಬಿಜೆಪಿ ಕೇಂದ್ರ ಸಮಿತಿ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಅವರನ್ನು ನಿಯಂತ್ರಿಸಲು ಮುಂದಾಗಿದೆ. ಇನ್ನೂ ಪಕ್ಷದಿಂದ ಯತ್ನಾಳ್ ಅವರನ್ನು ಉಚ್ಚಾಟಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಈ ಸಂಬಂಧ ರಾಜ್ಯಾಧ್ಯಕ್ಷ ಮೇಲೆ ಒತ್ತಡ ಕೆಲ ನಾಯಕರು ತರುತ್ತಿದ್ದಾರೆ.

Leave a Reply

Your email address will not be published. Required fields are marked *