ತುಮಕೂರು || ಶ್ರೀ ಸಿದ್ಧಲಿಂಗಸ್ವಾಮೀಜಿಗೆ ವಿವಾಹ ಆಮಂತ್ರಣ ನೀಡಿದ ಡಾಲಿ ಧನಂಜಯ್

ತುಮಕೂರು || ಶ್ರೀ ಸಿದ್ಧಲಿಂಗಸ್ವಾಮೀಜಿಗೆ ವಿವಾಹ ಆಮಂತ್ರಣ ನೀಡಿದ ಡಾಲಿ ಧನಂಜಯ್

ತುಮಕೂರು:  ಕಲ್ಪತರು ನಾಡು ತ್ರಿವಿಧ ದಾಸೋಹ ಸನ್ನಿಧಾನ ಶ್ರೀ ಸಿದ್ದಗಂಗಾ ಮಠಕ್ಕೆ  ನಟ ಡಾಲಿ ಧನಂಜಯ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ಮೇಲೆ ವೆಡ್ಡಿಂಗ್ ಕಾರ್ಡ್ ಇಟ್ಟು ಪೂಜೆ ಸಲ್ಲಿಸಿದ ಡಾಲಿ ಧನಂಜಯ್

ಗದ್ದುಗೆಗೆ ಸಹಸ್ರನಾಮಾರ್ಚನೆ ಮಾಡಿ ಪೂಜೆ ಸಲ್ಲಿಕೆ ಮಾಡಿದರು.

ನಂತರ‌ ಶ್ರೀ ಸಿದ್ಧಲಿಂಗಸ್ವಾಮೀಜಿ ಆಶೀರ್ವಾದ ಪಡೆದು ಸಿದ್ದಲಿಂಗ ಸ್ವಾಮೀಜಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದರು.

ಇದೇ ವೇಳೆ ಮಠಕ್ಕೆ ಪುನೀತ್ ರಾಜ್ ಕುಮಾರ್ ಜೊತೆಗೆ ಬಂದಿದ್ದನ್ನು ಡಾಲಿ ಧನಂಜಯ್ ನೆನಪು ಮಾಡಿಕೊಂಡರು. ತುಮಕೂರಿನ‌ ಕ್ಯಾತ್ಸಂದ್ರದಲ್ಲಿ ಇರುವ ಸಿದ್ದಗಂಗಾ ಮಠಕ್ಕೆ ಧನಂಜಯ್ ಬಂದಿದ್ದನ್ನು ನೋಡಿದ ಅಭಿಮಾನಿಗಳು ಸೆಲ್ಪಿ ತೆಗೆದುಕೊಳ್ಳಲು ಮುಗಿಸಿದ್ದರು.

Leave a Reply

Your email address will not be published. Required fields are marked *