ನವದೆಹಲಿ || ಚೀನಾ, ಅಮೆರಿಕಾಗಳಿಗೆ ಶಾಕ್ ನೀಡಿದ ಭಾರತ..! : ಎಐ ಅಖಾಡಕ್ಕೆ ಭಾರತದ ಎಂಟ್ರಿ! : ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ.!

ನವದೆಹಲಿ || ಚೀನಾ, ಅಮೆರಿಕಾಗಳಿಗೆ ಶಾಕ್ ನೀಡಿದ ಭಾರತ..! : ಎಐ ಅಖಾಡಕ್ಕೆ ಭಾರತದ ಎಂಟ್ರಿ! : ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ.!

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಎಐ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣನ್, ಭಾರತ ತನ್ನದೇ ಆದ ಎಐ ಮಾದರಿಯನ್ನು ಈ ವರ್ಷವೇ ಬಿಡುಗಡೆ ಮಾಡಲಿದೆ. ಭಾರತದಲ್ಲಿ ಕನಿಷ್ಠ ಆರು ದೊಡ್ಡ ಡೆವಲಪರ್‌ಗಳಿದ್ದಾರೆ. ಅವರು ಇನ್ನು ಕೇವಲ 6-3 ತಿಂಗಳುಗಳಲ್ಲಿ Al ಮಾದರಿಗಳನ್ನು ರಚಿಸಬಹುದು. ಪರಿಸರ ವ್ಯವಸ್ಥೆಯನ್ನು ರಚಿಸಲು, ಸಾಮಾನ್ಯ ಕಂಪ್ಯೂಟ್ ಸೌಲಭ್ಯಕ್ಕಾಗಿ ನಮ್ಮದೇ ಪ್ರಬಲವಾದ AI ಮಾದರಿ ಅಭಿವೃದ್ಧಿಪಡಿಸುವುದು. ಇಂದಿನ ಅಗತ್ಯ ಮತ್ತು ಆತ್ಮಂತ ಮುಖ್ಯವಾಗಿದೆ ಎಂದಿದ್ದಾರೆ.

ಭಾರತದ AI ಮಿಷನ್ ಗಮನದಲ್ಲಿಟ್ಟುಕೊಂಡು, ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಸ್ಥಾಪಿಸಲು ಸರ್ಕಾರವು ಆದ್ಯತೆ ನೀಡಿದೆ. ಭಾರತ ಎಐ ಕಂಪ್ಯೂಟ್ ಸೌಲಭ್ಯವು ನಿರೀಕ್ಷೆಗಳನ್ನು ಮೀರಿದೆ ಮತ್ತು ಸುಮಾರು 19,000 ಜಿಪಿಯುಗಳನ್ನು ಪಡೆದುಕೊಂಡಿದೆ ಇವುಗಳಲ್ಲಿ 12,896 Nvidia H100 GPU 2 1,480 Nvidia H200 GPU ಇವೆ.  ಅವುಗಳ ಪೈಕಿ10.000 ಜಿಪಿಯುಗಳು ಬಳಕೆಗೆ ಸಿದ್ಧವಾಗಿವೆ. ಈ ಸೌಲಭ್ಯವು ಎಲ್ಲರಿಗೂ ಮುಕ್ತವಾಗಲಿದ್ದು, ಮುಂದಿನ ದಿನಗಳಲ್ಲಿ ಇದರ ಕಾರ್ಯಾಚರಣೆ ಆರಂಭವಾಗಲಿದೆ ಎಂದಿದ್ದಾರೆ.

ಭಾರತದಲ್ಲಿ ಎಐ ಫೌಂಡೇಶನ್ ಮಾದರಿಯು ಸಿದ್ದ

ಭಾರತವು ತನ್ನದೇ ಆದ ಎಐ ಫೌಂಡೇಶನ್ ಮಾದರಿಯನ್ನು ಸಿದ್ಧಪಡಿಸುತ್ತದೆ ಈ ಮಾದರಿಯು ಸಹ 6-8 ತಿಂಗಳುಗಳಲ್ಲಿ ಸಿದ್ಧವಾಗಲಿದೆ. ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದರ ಡೇಟಾಸೆಟ್ ಅನ್ನು ಸಿದ್ಧಪಡಿಸಲಾಗುತ್ತದೆ. AI ಮಾದರಿಗಳನ್ನು ರಚಿಸಲು ಆಸಕ್ತಿ ಹೊಂದಿರುವ ಡೆವಲಪರ್‌ಗಳು ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಎಐ ಜನರೇಟ‌ರ್ ತೀವ್ರ ಪೈಪೋಟಿ

2023 ರ ಕೊನೆಯಲ್ಲಿ OpenAI ChatGPT ಅನ್ನು ಪಾರಂಭಿಸುವ ಮೂಲಕ ೦ಖೆ ಯುಗ ಪ್ರಾರಂಭವಾಯು. ಈ ರೇಸ್‌ನಲ್ಲಿ ಇದೀಗ ಚೀನಾದ ಸ್ಟಾರ್ಟ್‌ ಆಪ್ DeepSeek ಸೇರಿದೆ. ಚೀನಾವು ಇದೀಗ ಅಮೆರಿಕನ್ ಕಂಪನಿಗಳಿಗಿಂತ ಕಡಿಮೆ ವೆಚ್ಚದಲ್ಲಿ AI ಮಾದರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ಅಲುಗಾಡಿಸಿ ಬಿಟ್ಟಿದೆ. ಇದರಿಂದ ಇತ್ತೀಚೆಗೆ ಅಮೇರಿಕಾದ ಶೇರು ಮಾರುಕಟ್ಟೆಯನ್ನು ನೆಲ ಕಚ್ಚುವಂತೆ ಮಾಡಿತ್ತು. ಸದ್ಯ ಅಮೆರಿಕ-ಚೀನಾ ನಡುವೆ ಎಐ ರೇಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿರುವ ಸಮಯದಲ್ಲಿ ಇದೀಗ ಭಾರತವೂ ಸಹ ಎಐ ರೇಸ್‌ಗೆ ಸಿದ್ಧವಾಗಿದೆ

Leave a Reply

Your email address will not be published. Required fields are marked *