ಬೆಂಗಳೂರು ||’ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್’ ವ್ಯವಸ್ಥೆಯ ಮೊದಲ ಮೆಟ್ರೋ ಮಾರ್ಗ 2026ಕ್ಕೆ ಓಪನ್

ಬೆಂಗಳೂರಿನಿಂದ ತುಮಕೂರಿಗೆ Metro , Urban Train

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗ (Metro Pink Line) ಮುಂದಿನ ವರ್ಷ ಕಾರ್ಯಾಚರಣೆಗೆ ಸಿದ್ದವಾಗುತ್ತಿದೆ. ಒಂದೆಡೆ ಸಿವಿಲ್ ಕಾಮಗಾರಿ ಕೆಲಸ ಭರದಿಂದ ಸಾಗಿದೆ. ಮತ್ತೊಂದೆಡೆ ಭೂಗತ ಸುರಂಗ ಮಾರ್ಗ ಕೊರೆಯುವ ಕೆಲಸ ಶೇಕಡಾ 95ರಷ್ಟು ಪೂರ್ಣಗೊಂಡಿದೆ. ಈ ಮಾರ್ಗದ ಮತ್ತೊಂದು ವಿಶೇಷತೆ ಏನೆಂದರೆ ಉದ್ದೇಶಿತ ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ (PSD) ವ್ಯವಸ್ಥೆ ಅಳವಡಿಕೆ ಇಲ್ಲಿ ಆಗಲಿದೆ.

ಬೆಂಗಳೂರು ಮೆಟ್ರೋ ಗುಲಾಬಿ ಮಾರ್ಗದ ಒಟ್ಟು 21 ಕಿಲೋ ಮೀಟರ್ ಉದ್ದದಲ್ಲಿ 13 ಕಿಲೋ ಮೀಟರ್ ಸುರಂಗ ಮಾರ್ಗ ಬರಲಿದೆ. ನಾಗವಾರದಿಂದ ಡೈರಿ ವೃತ್ತದವರೆಗಿನ ಈ ಸುರಂಗದಲ್ಲಿ ನಿಲ್ದಾಣ ನಿರ್ಮಾಣದ ಕೆಲಸಗಳು ನಡೆದಿವೆ. ಸುರಂಗದಲ್ಲೇ ಒಟ್ಟು 12 ನಿಲ್ದಾಣಗಳು, 06 ಎತ್ತರದ ನಿಲ್ದಾಣಗಳು ಬರುತ್ತವೆ.

ಮೆಟ್ರೋ ಗುಲಾಬಿ ಭೂಗತ ಮಾರ್ಗವು ಗರಿಷ್ಠ 80 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಎಲ್ಲ ನಿಲ್ದಾಣಗಳು ತಲಾ 200 ಮೀಟರ್ ಉದ್ದವನ್ನು ಹೊಂದಿದ್ದು, ವಿಶಾಲವಾಗಿದೆ. ಇಲ್ಲಿನ ಪ್ಲಾಟ್ಪಾರ್ಮ್ಗಳು ಸ್ಕ್ರೀನ್ ಡೋರ್ ಹೊಂದಿರಲಿವೆ. ಇದು ಯಾವುದೇ ಸಂಭವನೀಯ ಅನಾಹುತ ಆಗದಂತೆ ತಡೆಯಲು ಅನುಕೂಲವಾಗುತ್ತದೆ.

ಈಗಾಗಲೇ ಹಳದಿ ಮಾರ್ಗ ಸಿದ್ಧವಾಗಿದೆ. ಇಲ್ಲಿ ಈ ಪಿಎಸ್ಡಿ ವ್ಯವಸ್ಥೆ ಮಾಡಲಾಗಿಲ್ಲ. ಒಂದೆರಡು ಆತ್ಮಹತ್ಯೆ ಪ್ರಕರಣಗಳು, ಅನಾಹುತಗಳು ಸಂಭವಿಸಿದ ಬೆನ್ನಲ್ಲೆ ಎಚ್ಚೆತ್ತ ನಮ್ಮ ಮೆಟ್ರೋ ಸದ್ಯ ಮೆಜೆಸ್ಟಿಕ್ನಲ್ಲಿ ಬ್ಯಾರಿಕೇಡ್ ರೀತಿಯಲ್ಲಿ ಅಳವಡಿಕೆ ಮಾಡಿದೆ. ವಾಸ್ತವದಲ್ಲಿ ಪಿಎಸ್ಡಿ ಬೇರೆ ರೀತಿಯಲ್ಲಿರುತ್ತದೆ.

ಏನಿದು ಪಿಎಸ್ಡಿ ವ್ಯವಸ್ಥೆ? ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ ವ್ಯವಸ್ಥೆಯು ಬೆಂಗಳೂರಿನ ಯಾವೊಂದು ನಿಲ್ದಾಣದಲ್ಲಿ ನಿರ್ಮಿಸಲಾಗಿಲ್ಲ. ದೆಹಲಿ, ಮುಂಬೈ ಹೈದರಾಬಾದ್ ಇತರೆಡೆ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಅಂಚಿನಲ್ಲಿ ಬಾಗಿಲು ರೀತಿ ಆಟೋ ಮ್ಯಾಟಿಕ್ ಸ್ಕ್ರೀನ್ ಡೋರ್ ನಿರ್ಮಿಸಿರಲಾಗುತ್ತದೆ. ರೈಲು ಬರುವವರೆಗೂ ಇದು ತೆರೆಯುವುದಿಲ್ಲ. ರೈಲು ಬರುತ್ತಿದ್ದಂತೆ ಮೆಟ್ರೋ ಬಾಗಿಲು ತೆರೆದಂತೆ ಇದು ತೆರೆದುಕೊಳ್ಳುತ್ತದೆ. ರೈಲು ಹೋದ ಬಳಿಕ ಮತ್ತೆ ಬಾಗಿಲು ಹಾಕಿಕೊಳ್ಳುವ ವ್ಯವಸ್ಥೆ ಆಗಿದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ನಲ್ಲಿ ಕಾಣುವ ಹಳದಿ ಗೆರೆ ದಾಟದಂತೆ ಆಗಾಗ ಸಿಬ್ಬಂದಿ ಪ್ರಯಾಣಿಕರನ್ನು ಎಚ್ಚರಿಸುತ್ತಿರುತ್ತಾರೆ. ಈ ಹಳದಿ ಲೈನ್ ಸ್ಥಳದಲ್ಲಿ ಪಿಎಸ್ಡಿ ವ್ಯವಸ್ಥೆ ನಿರ್ಮಾಣವಾಗಬಹುದು ಎನ್ನಲಾಗಿದೆ. ಅತ್ತಿಗುಪ್ಪೆ, ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ತಲಾ ಒಬ್ಬರು ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುವಾಗ ಆತ್ಮಹತ್ಯೆಗೆ ವ್ಯಕ್ತಿ ಯತ್ನಿಸಿದ್ದ. ಇಂತಹ ಘಟನೆ ಮರುಕಳಿಸಿದಂತೆ ಈ ಪಿಎಸ್ಡಿ ವ್ಯವಸ್ಥೆ ತಡೆಯುತ್ತದೆ. ಸುರಂಗ ಕೊರೆಯುವ ಸವಾಲು ಗುಲಾಬಿ ಮಾರ್ಗದಲ್ಲಿ ಹಂತ 1 ಮತ್ತು ಹಂತ 2 ರ ಅಡಿಯಲ್ಲಿ ಕಾಮಗಾರಿ, ಸುರಂಗ ಕೊರತೆ ನಡೆಸಲಾಯಿತು. ಈ ಸುರಂಗವೇಳೆ ಸಾಕಷ್ಟು ಸವಾಲುಗಳನ್ನು ಎದುರಿಸಿರುವ ಸಿಬ್ಬಂದಿ, ಐದು ವರ್ಷದ ಬಳಿಕ ಕೊನೆಗೂ ಯಶಸ್ವಿಯಾಗಿದ್ದಾರೆ. ಶೀಘ್ರವೇ ಇತರ ಸಿವಿಲ್ ಕೆಲಸ ಪೂರ್ಣಗೊಳ್ಳಲಿದ್ದು, ಟ್ರ್ಯಾಕ್ ಕೆಲಸಗಳು ನಡೆಯಲಿವೆ. ಬಳಿಕ ಸಿಗ್ನಲ್, ವಿದ್ಯುತ್ ಸರಬರಾಜು ಕೆಲಸಗಳು ಆಗಿ 2026ರ ಹೊತ್ತಿಗೆ ಈ ಮಾರ್ಗವು ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *