ಮೇಕಪ್ ಮಾಡುವಾಗ ಬ್ರಶ್, ಕೈ ಬೆರಳನ್ನು ಬಳಸ್ತಿರಾ? ಇದ್ರಲ್ಲಿ ನಿಮ್ಮ ಮುಖಕ್ಕೆ ಯಾವುದು ಸೂಕ್ತ ಗೊತ್ತಾ?

ಮೇಕಪ್ ಮಾಡುವಾಗ ಬ್ರಶ್, ಕೈ ಬೆರಳನ್ನು ಬಳಸ್ತಿರಾ? ಇದ್ರಲ್ಲಿ ನಿಮ್ಮ ಮುಖಕ್ಕೆ ಯಾವುದು ಸೂಕ್ತ ಗೊತ್ತಾ?

ನಾವೆಲ್ಲರೂ ಸಾಮಾನ್ಯವಾಗಿ ಕೇಳಿದ್ದೇವೆ  ಮೇಕಪ್ ಮಾಡಲು ಸೆಲೆಬ್ರಿಟಿಗಳು ಹೆಚ್ಚಾಗಿ ಮೇಕಪ್ ಬ್ರಶ್ಗೆ ಆದ್ಯತೆ ನೀಡಿದರೆ, ಮೇಕಪ್ ಕಲಾವಿದರು ತಮ್ಮ ಕೈ ಬೆರಳುಗಳನ್ನು ಬಳಸುತ್ತಾರೆ, ಇನ್ನೂ ಕೆಲವರು ಮೇಕಪ್ ಸ್ಪಂಜ್ಗಳನ್ನು ಬಳಸ್ತಾರೆ ಅಂತ.

ಹಾಗಾದ್ರೆ ಮೇಕಪ್ ಮಾಡಲು ಉತ್ತಮವಾದ ಸಾಧನ ಯಾವುದು? ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಮೇಕಪ್ ಮಾಡಲು ಸೂಕ್ತವಾದ ಸಾಧನ:

1. ಬೆರಳುಗಳು: ಹೆಚ್ಚಿನ ಜನರು ನಮ್ಮ ಮುಖಕ್ಕೆ ಬೆರಳುಗಳ ಮೂಲಕವೇ ಕ್ರೀಮ್, ಪೌಡರ್, ಮಾಶ್ಚರೈಸರ್ಅನ್ನು ಹಚ್ಚುತ್ತಾರೆ. ಹೀಗೆ ಕೈ ಬೆರಳುಗಳ ಮೂಲಕ ಮೇಕಪ್ ಮಾಡಲು ನೀವು ಬಯಸಿದರೆ, ಉಂಗುರದ ಬೆರಳು ಅತ್ಯುತ್ತಮವಾಗಿದೆ. ಏಕೆಂದರೆ ಅದು ಮುಖಕ್ಕೆ ಕಡಿಮೆ ಒತ್ತಡವನ್ನು ನೀಡುತ್ತದೆ. ಮುಖಕ್ಕೆ ಕ್ರೀಮ್, ಮಾಶ್ಚರೈಸರ್ಅನ್ನು ಹಚ್ಚುವಾಗ ಯಾವಾಗಲೂ ರಬ್ ಮಾಡುವ ಬದಲು ಬೆರಳುಗಳಿಂದ ಟ್ಯಾಪ್ ಮಾಡುವುದು ಉತ್ತಮ. ನೆನಪಿರಲಿ, ನಿಮ್ಮ ಬೆರಳುಗಳಿಂದ ಮೇಕ್ಅಪ್ಅನ್ನು ಮಾಡುವಾಗ ಮೊದಲು ಕೈಗಳನ್ನು ತೊಳೆಯಲು ಮರೆಯದಿರಿ.

2. ಬ್ರಶ್ಗಳು: ಮೇಕಪ್ ಬ್ರಶ್ಗಳು, ನಿಮ್ಮ ಬೆರಳುಗಳಂತೆ ಉತ್ತಮವಾಗಿ ಮೇಕಪ್ ಮಾಡಲು ಸಹಾಯ ಮಾಡುತ್ತದೆ. ಮೇಕಪ್ ಬ್ರಶ್ಗಳನ್ನು ಬಳಸುವಾಗ ಎಲ್ಲ ಕ್ರೀಮ್, ಪೌಂಢೇಶನ್ಗಳನ್ನು ಒಟ್ಟಿಗೆ ಸೇರಿಸಿ ಹಚ್ಚುವುದನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಸ್ಕಿನ್ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಿದೆ.

ನಿಮ್ಮ ಚರ್ಮದ ಬಣ್ಣ ಕಾಣದ ರೀತಿಯಲ್ಲಿ ನೀವು ಮೇಕಪ್ಅನ್ನು ಬಯಸಿದರೆ ಮೇಕಪ್ ಬ್ರಶ್ ಅನ್ನು ಬಳಸುವುದು ಸೂಕ್ತ. ಮೊಡವೆಯನ್ನು ಮರೆಮಾಚಲು ನೀವು ಬ್ಯೂಟಿ ಬ್ಲೆಂಡರ್ ಸ್ಪಾಂಜ್ ಅನ್ನು ಬಳಸುವ ಬದಲು ಮೇಕಪ್ ಬ್ರಶ್ ಅನ್ನು ಬಳಸುವುದು ಒಳಿತು. ಮುಖಕ್ಕೆ ಸರಿಹೊಂದುವ ರೀತಿಯಲ್ಲಿ ಫೌಂಡೇಶನ್ ಬ್ರಶ್ ಅನ್ನು ಬಳಸುವುದರ ಮೂಲಕ ಮೊಡವೆ ಕಲೆಗಳನ್ನು ಮರೆಮಾಚಬಹುದು. ಹಾಗೆಯೇ ಮೇಕಪ್ ಮಾಡಲು ಮೊನಚಾದ ತುದಿಯ ಮೇಕಪ್ ಬ್ರಶ್ಗಳ ಬದಲು ಮೃದುವಾದ ಬ್ರಶ್ ಬಳಸುವುದ ಅವಶ್ಯಕವಾಗಿದೆ.

3. ಸ್ಪಂಜುಗಳು: ನೀವು ನ್ಯಾಚುರಲ್ ಮೇಕಪ್ ಅನ್ನು ಬಯಸಿದರೆ ಮೇಕಪ್ ಸ್ಪಂಜ್ ಅತ್ಯುತ್ತಮವಾಗಿದೆ. ನಿಮ್ಮ ಮೇಕಪ್ ಹೆಚ್ಚು ಗಂಟೆಗಳ ಕಾಲ ಉಳಿಯಳು ಮೇಕಪ್ ಸ್ಪಂಜ್ ಸಹಾಯ ಮಾಡುತ್ತದೆ. ಬ್ರಶ್ಗಳಂತೆ ಮುಖದ ಮೇಲೆ ಗೆರೆಗಳು ಬೀಳದಂತೆ ಇದು ತಡೆಯುತ್ತದೆ. ಮುಖಕ್ಕೆ ಹಚ್ಚಿದ ಕ್ರೀಮ್ಗಳು, ಫಾಂಡೇಶನ್ಗಳು ಎದ್ದು ಕಾಣದ ರೀತಿಯಲ್ಲಿ ನ್ಯಾಚುರಲ್ ಬ್ಯೂಟಿಯನ್ನ ಈ ಮೇಕಪ್ ಸ್ಪಂಜ್ ನೀಡುತ್ತದೆ.

ಕೊನೆಯದಾಗಿ, ನೀವು ನಿಮ್ಮ ಮುಖಕ್ಕೆ ಸರಿ ಹೊಂದುವ ಯಾವುದೇ ಮೇಕಪ್ ಐಟಂಗಳನ್ನು ಬಳಸುವಾಗ ಅದು ಉತ್ತಮ ಗುಣಮಟ್ಟವನ್ನು ಹೊಂದಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

Leave a Reply

Your email address will not be published. Required fields are marked *