ಶಿರಾ; ಕುರಿ ಗೊಬ್ಬರವನ್ನು ತುಂಬಿಕೊOಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿರುವ ಘಟನೆ ಶಿರಾದಲ್ಲಿ ನೆಡೆದಿದೆ. ಲಾರಿಯನ್ನ ಎಡಭಾಗಕ್ಕೆ ಎಳೆದ ಪರಿಣಾಮವಾಗಿ ರಸ್ತೆಯಿಂದ ತಗ್ಗು ಪ್ರದೇಶಕ್ಕೆ ಲಾರಿ ಉರುಳಿದೆ. ಅಡಕೆ ಮತ್ತು ಬಾಳೆ ತೋಟಕ್ಕೆ ಬೃಹತ್ ಲಾರಿ ಪಲ್ಟಿಯಾಗಿದೆ. ಇನ್ನು ಲಾರಿ ಚಾಲಕನು ಪ್ರಾಣಾಪಾಯದಿಂದ ಪಾgಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

ಸುಮಾರು ಮೂರ್ನಾಲ್ಕು ಅಡಿ ಆಳದ ತಗ್ಗು ಪ್ರದೇಶಕ್ಕೆ ಲಾರಿ ಉರುಳಿದೆ, ಶಿರಾ ತಾಲೂಕಿನ ಹುಂಜಿನಾಳು ದೊಡ್ಡ ಹಳ್ಳದ ದಿಣ್ಣೆ ಮೇಲೆ ಈ ಘಟ£ ನೆಡೆೆದಿದೆ. ಶಿರಾ ಅಮರಾಪುರದಿಂದ ಹುಂಜಿನಾಳ್ ಕಡೆ ಚಲಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಲಾರಿ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಇನ್ನು ಪಲ್ಟಿಯಾಗಿ ಆಗಿ ಬಿದ್ದ ಲಾರಿ ನೋಡಲು ಸುತ್ತಮುತ್ತ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು.