ತುಮಕೂರು|| ಈ ಕಾಲೇಜುಗಳಲ್ಲಿ first PUC science department ಉಚಿತ ದಾಖಲಾತಿ

ತುಮಕೂರು|| ಈ ಕಾಲೇಜುಗಳಲ್ಲಿ first PUC science department ಉಚಿತ ದಾಖಲಾತಿ

ತುಮಕೂರು :  ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ದೇಸಾಯಿ/ಅಟಲ್ ಬಿಹಾರಿ ವಾಜಪೇಯಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪಿಸಿಎಂಬಿ ಮತ್ತು ಪಿಸಿಎಂಸಿ ತರಗತಿ ದಾಖಲಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು 2024-25ನೇ ಸಾಲಿನಲ್ಲಿ ಅಭ್ಯಸಿಸಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. ಆಸಕ್ತ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಸಾಮಾನ್ಯ/ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸಂಬಂಧಿಸಿದ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಮೇ 14ರೊಳಗಾಗಿ ಸಲ್ಲಿಸತಕ್ಕದ್ದು. ಅರ್ಜಿಯೊಂದಿಗೆ ವಿದ್ಯಾರ್ಥಿಯ ಇತ್ತೀಚಿನ 2 ಭಾವಚಿತ್ರ, ಎಸ್.ಎಸ್.ಎಲ್.ಸಿ. ಪ್ರಾವಿಷನಲ್ ಅಂಕಪಟ್ಟಿ, ಸ್ಯಾಟ್ಸ್(SATS No) ನಂಬರ್, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪೋಷಕರ/ ಹಿಂದಿನ ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ನಂಬರ್, ವಿಶೇಷ ಪ್ರಮಾಣ ಪತ್ರ(ಇದ್ದಲ್ಲಿ)ವನ್ನು ಲಗತ್ತಿಸಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ತುಮಕೂರು ತಾಲ್ಲೂಕು ಕೋಡಿಮುದ್ದನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು(ಮೊ.ಸಂ.9740894467); ಕೊರಟಗೆರೆ ತಾಲ್ಲೂಕು ಬೈಚಾಪುರ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು(9164997010); ಶಿರಾ ತಾಲೂಕು ಭುವನಹಳ್ಳಿ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು(7899883260) ಹಾಗೂ ಪಾವಗಡ ತಾಲ್ಲೂಕು ದೊಡ್ಡಹಳ್ಳಿ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ (9916586369) ಕಾಲೇಜಿಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *