ತುಮಕೂರು: ರಾಜ್ಯದ್ಯಂತ ಕರ್ನಾಟಕದ ಮಹಿಳೆಯರಿಗೆ ಉಚಿತ ಪ್ರಯಾಣದ ಪರಿಣಾಮ ಬಸ್ಸಿನಲ್ಲಿ ಹಿಂದೆ ಸೀಟ್ಗಾಗಿ ಜಗಳ ನಡೆದಿತ್ತು. ಆದರೆ ಈಗ ಪಾವಗಡದಲ್ಲಿ ಬಸ್ಸು ಹತ್ತಲು ಮಹಿಳೆಯರು ಜಗಳ ಮಾಡಿದ್ದಾರೆ.

ದೇವಸ್ಥಾನದಲ್ಲಿ ಪೂಜೆ ಮುಗಿಸಿದ ನಂತರ ಬಸ್ಸು ಹತ್ತಲು ಮಹಿಳೆಯರು ಮುಗಿಬಿದ್ದಿದ್ದಾರೆ. ಬಹುತೇಕ ಬಸ್ಸುಗಳು ರಶ್ ಇದ್ದ ಕಾರಣ ಮಹಿಳೆಯರು ಸಿಕ್ಕಿದ ಬಸ್ಸು ಹತ್ತಲು ಮುಂದಾಗಿದ್ದಾರೆ. ಈ ವೇಳೆ ಒಬ್ಬರನ್ನು ತಳ್ಳಿ ಮತ್ತೊಬ್ಬರು ಹತ್ತಲು ಪೈಪೋಟಿ ನಡೆಸಿದ್ದಾರೆ.

ಬಸ್ ಬಂದ ಕೂಡಲೇ ಸೀಟ್ ಹಿಡಿಯಲು ನಾನು ಮುಂದು ತಾ ಮುಂದು ಮಹಿಳೆ ಬಸ್ಸು ಹತ್ತಿದ್ದಾರೆ. ಈ ವೇಳೆ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಗೆ ಹೊಡೆದಿದ್ದಾರೆ. ಮಹಿಳೆಯರು ಬಸ್ಸು ಹತ್ತಲು ಜಗಳ ಮಾಡುತ್ತಿರುವ ವಿಡಿಯೋ ಸೆರೆಯಾಗಿದೆ.