Nelamangala || ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಯುವ ಡ್ಯಾನ್ಸರ್ಗಳ ಸಾ*

Nelamangala || ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಯುವ ಡ್ಯಾನ್ಸರ್ಗಳ ಸಾ*

ನೆಲಮಂಗಲ: ಡ್ಯಾನ್ಸ್ ಇವೆಂಟ್ನ ಪೇಮೆಂಟ್ ಹಣ ತೆಗೆದುಕೊಂಡು ಬರುವಾಗ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಡ್ಯಾನ್ಸರ್ ಜೋಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಸೋಮವಾರ(ಇಂದು) ಬೆಳಗ್ಗೆ ಘಟನೆ ಸಂಭವಿಸಿದೆ. ಬೆಂಗಳೂರಿನ ಶ್ರೀರಾಮಪುರದ ಪ್ರಜ್ವಲ್ (22) ಹಾಗೂ ಸಹನಾ (21) ಮೃತಪಟ್ಟವರು. ಇವರು ಕೆಲ ಸಿನಿಮಾಗಳಲ್ಲಿಯೂ ಡ್ಯಾನ್ಸರ್ಗಳಾಗಿ ಕೆಲಸ ಮಾಡಿದ್ದರು. ಹಲವು ಇವೆಂಟ್ಗಳಲ್ಲಿಯೂ ಜೋಡಿಯಾಗಿ ಡ್ಯಾನ್ಸ್ ಪ್ರದರ್ಶನ ನೀಡಿದ್ದರು.

ತುಮಕೂರಿನ ಕುಣಿಗಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರೂ, ವೇತನ ಪಡೆದುಕೊಂಡು ಬೈಕ್ನಲ್ಲಿ ಬೆಂಗಳೂರಿನತ್ತ ಬರುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನೆಲಮಂಗಲ ಸಂಚಾರ ಠಾಣೆ ಪೊಲೀಸರು ಲಾರಿಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *