ಒಂದು ತಿಂಗಳಾದರೂ High Court ಸೂಚನೆಗೆ ಡೋಂಟ್ ಕೇರ್ ಎಂದ Sonu Nigam

ಒಂದು ತಿಂಗಳಾದರೂ High Court ಸೂಚನೆಗೆ ಡೋಂಟ್ ಕೇರ್ ಎಂದ Sonu Nigam

ಗಾಯಕ ಸೋನು ನಿಗಮ್ ರಿಂದ ಕನ್ನಡ ಭಾಷೆ ಬಗ್ಗೆ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆಗೂ ಕೇರ್ ಮಾಡದೇ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಘಟನೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂದರು ಸೋನು ನಿಗಮ್ ಇನ್ನೂ ಹೇಳಿಕೆ ಕೊಟ್ಟಿಲ್ಲ ಎನ್ನಲ್ಲಾಗಿದೆ.

ಬಲವಂತದ ಕ್ರಮ ಬೇಡ ತನಿಖೆಗೆ ಸಹಕರಿಸಿ ಎಂದಿತ್ತು ಕೋರ್ಟ್. ಆದರೆ ಇದುವರೆಗೂ ಪೊಲೀಸರ ಸಂಪರ್ಕಕ್ಕೆ ಸೋನು ನಿಗಮ್ ಸಿಕ್ಕಿಲ್ಲ. ಸೋನು ಬಳಿಯೇ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ಹೈಕೋರ್ಟ್ ಸೂಚಿಸಿತ್ತು. ಆದರೆ ಭೇಟಿಗೆ ಸಮಯ ಕೊಡದೇ ಸೋನು ನಿಗಮ್ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಯಾವಾಗ ಕರೆ ಮಾಡಿದರೂ ಸಮಯ ಕೋಡೊದಾಗಿ ಸತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇನ್ನೆರೆಡು ದಿನ ಕಾದು ನೋಡಲು ಪೊಲೀಸರ ಚಿಂತನೆ ಮಾಡುತ್ತಿದ್ದು, ಸಮಯ ಕೊಟ್ಟಿಲ್ಲ ಅಂದ್ರೆ ಕೋರ್ಟ್ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನೆರಡು ದಿನಗಳಲ್ಲಿ ಕೋರ್ಟ್ ಗಮನಕ್ಕೆ ಆವಲಹಳ್ಳಿ ಪೊಲೀಸರು ಗಮನ ತರಲಿದ್ದಾರೆ.

ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಕನ್ನಡಿಗರ ಹೋಲಿಕೆ ಪ್ರಕರಣಕ್ಕೆ ಸಂಬಂಧಿಸಿ ಸೋನು ನಿಗಂ ವಿರುದ್ಧ ದೂರು ದಾಖಲಾಗಿತ್ತು. ಕೋರ್ಟ್ ಗಾಯಕನ ಮನೆಗೆ ತೆರಳಿ ಹೇಳಿಕೆ ದಾಖಲಿಸಲು ಪೊಲೀಸರಿಗೆ ಅನುಮತಿ ನೀಡಿದೆ. ಬೆಂಗಳೂರಿಗೆ ಸೋನು ನಿಗಮ್ ಹಾಜರಾದರೆ ಸಮಸ್ಯೆ ಆಗಬಹುದು. ಸೋನು ನಿಗಮ್ ವೆಚ್ಚದಲ್ಲೇ ಅವರಿದ್ದ ಸ್ಥಳದಲ್ಲಿ ತನಿಖೆ ನಡೆಸಲು ಹೈಕೋರ್ಟ್ ಅವಕಾಶ ನೀಡಿತ್ತು.

ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶವಿದೆ. ಸದ್ಯ ಸೋನು ನಿಗಮ್ ಸಂಪರ್ಕ ಮಾಡಿರೋ ಅವಲಹಳ್ಳಿ ಪೊಲೀಸರಿಗೆ ಗಾಯಕನ ಡೇಟ್ ಸಿಗುತ್ತಿಲ್ಲ ಎನ್ನಲಾಗಿದೆ. ಪ್ರೋಗ್ರಾಂಗಳಿಗೆ ಡೇಟ್ ಕೊಟ್ಟಿರೋ ಗಾಯಕನಿಂದ ಪೊಲೀಸರಿಗೆ ಮಾತ್ರ ಡೇಟ್ ಸಿಗುತ್ತಿಲ್ಲ.

ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುವಾಗ ಸೋನು ನಿಗಂ ಬಳಿ ಕನ್ನಡ ಹಾಡು ಹಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ರು. ಅದಕ್ಕೆ ಸೋನು ನಿಗಮ್ ಅವರು. ‘ಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದು’ ಎಂದು ಅವರು ಹೇಳಿದ್ದರು.

ಈ ಹೇಳಿಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಸೋನು ನಿಗಮ್ ಕ್ಷಮೆಯಾಚಿಸಿದ್ರು. ಇದೀಗ ಕರ್ನಾಟಕದಲ್ಲಿ ಬರುವ ಗಾಯಕರು (Singer), ಕಾರ್ಯಕ್ರಮ ನಿಯೋಜಿಸುವವರಿಗೆ ಬೆಂಗಳೂರು ಪೊಲೀಸರು ಖಡಕ್ ಸೂಚನೆ ನೀಡಲು ಮುಂದಾಗಿದ್ದಾರೆ. ಇನ್ಮುಂದೆ ಖಡಕ್ ಕಂಡೀಷನ್ ಅಪ್ಲೈ ಎಂದಿದ್ದಾರೆ.

ಯಾವುದೇ ರಾಜ್ಯದ ಗಾಯಕರು ಬಂದ್ರೂ, ಜನರು ಕನ್ನಡ ಹಾಡು ಕೇಳಿದರೆ ಹಾಡಲೇಬೇಕು. ಅನಗತ್ಯವಾಗಿ ಪ್ರೇಕ್ಷಕರೊಂದಿಗೆ ಕಿರಿಕ್ ಮಾಡುವಂತಿಲ್ಲ. ಕನ್ನಡ ಗೀತೆ ಕೇಳಿದರೆ ಕಡ್ಡಾಯವಾಗಿ ಹಾಡಲೇಬೇಕು. ಒಂದು ವೇಳೆ ಕನ್ನಡ ಗಾಯಕರು ಇಲ್ಲದಿದ್ದರೆ, ಅದಕ್ಕಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಷರತ್ತು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *