ಬೇಬಿ ವರ್ಮರ್​ಗಳ ಕೊರತೆಯಿಂದ ಎರಡೆರಡು ಮಕ್ಕಳಿಗೆ ಚಿಕಿತ್ಸೆ.| Baby Worms

ಬೇಬಿ ವರ್ಮರ್​ಗಳ ಕೊರತೆಯಿಂದ ಎರಡೆರಡು ಮಕ್ಕಳಿಗೆ ಚಿಕಿತ್ಸೆ.| Baby Worms

ಹುಬ್ಬಳ್ಳಿ : ಹುಬ್ಬಳ್ಳಿಯ ಕಿಮ್ಸ್​ ನಲ್ಲಿ ರೋಗದಿಂದ ಬಳಲುವ ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು ಮತ್ತು ಬೇಬಿ ವರ್ಮರ್​ಗಳ ಕೊರತೆ ಇದೆ. ಕಿಮ್ಸ್​ನಲ್ಲಿ 240 ಕ್ಕೂ ಹೆಚ್ಚು ಬೇಬಿ ವರ್ಮರ್​ಗಳ ಅವಶ್ಯಕತೆ ಇದೆ. ಆದರೆ, ಸದ್ಯ ಕೇವಲ 110 ಬೇಬಿ ವರ್ಮರ್​ಗಳು ಮಾತ್ರ ಇವೆ. ನವಜಾತ ಶಿಶುಗಳನ್ನು ಎನ್​ಐಸಿಯು, ಎಸ್​ಎನ್​ಸಿಯುಗೆ ದಾಖಲಿಸಿದರೇ, ಒಂದೇ ಬೇಬಿ ವರ್ಮರ್​ ಮೂಲಕ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ. ಒಂದು ಬೇಬಿ ವರ್ಮರ್​ನಲ್ಲಿ ಒಂದೇ ಮಗುವಿಗೆ ಚಿಕಿತ್ಸೆ ನೀಡಬೇಕು ಎಂಬ ನಿಯಮವಿದ್ದರೂ ಕೂಡ, ಬೇಬಿ ವರ್ಮರ್​ಗಳ ಕೊರತೆಯಿಂದ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಿಮ್ಸ್​ಗೆ ಭೇಟಿ ನೀಡಿದಾಗ, ಒಂದೇ ಬೇಬಿ ವರ್ಮರ್​ನಲ್ಲಿ ಎರಡೆರಡು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ಕಿಮ್ಸ್​ನಲ್ಲಿ ಪ್ರತಿ ತಿಂಗಳು ಸಾವಿರಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಹುಟ್ಟುವಾಗಲೇ ಕೆಲ ಮಕ್ಕಳು ಅನೇಕ ತೊಂದರೆಯಿಂದ ಹುಟ್ಟುವದರಿಂದ, ಅವುಗಳನ್ನು ನವಜಾತ ಶಿಶುಗಳನ್ನು ತೀರ್ವ ನಿಘಾ ಘಟಕದಲ್ಲಿ ಕೆಲ ದಿನಗಳ ಕಾಲ ಇಟ್ಟು, ಚಿಕಿತ್ಸೆ ನೀಡಲಾಗುತ್ತದೆ. ನಂತರ ಹೆತ್ತವರಿಗೆ ನೀಡಲಾಗುತ್ತದೆ. ಚಿಕಿತ್ಸೆ ನೀಡಿದ ನಂತರವೂ ಕೂಡ ಅನೇಕ ಮಕ್ಕಳು ಮೃತಪಟ್ಟಿವೆ. ಕಳೆದ ವರ್ಷ ಎಸ್​​​​ಎನ್​ಸಿಯು, ಎನ್​ಸಿಯು ಸೇರಿದಂತೆ ಮಕ್ಕಳ ತುರ್ತು ಆರೈಕೆ ಘಟಕಗಳಿಗೆ ಐದು ಸಾವಿರ ಮಕ್ಕಳು ದಾಖಲಾಗಿದ್ದವು. ಅವುಗಳಲ್ಲಿ 454 ಮಕ್ಕಳು ಮೃತಪಟ್ಟಿವೆ. ಈ ವರ್ಷ ಇಲ್ಲಿಯವರಗೆ 2794 ಮಕ್ಕಳು ದಾಖಲಾಗಿದ್ದರೇ, 291 ಮಕ್ಕಳು ಮೃತಪಟ್ಟಿವೆ. ಇದಕ್ಕೆ ಕಾರಣ, ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ಕೊರತೆ ಕಾರಣ ಅಂತ ಹೇಳಲಾಗುತ್ತಿದೆ.

ಸೂಕ್ತ ಚಿಕಿತ್ಸೆ ನೀಡಲು ಬೇಬಿ ವರ್ಮರ್​ಗಳು ಇರಬೇಕು. ಆದರೆ, ಕಿಮ್ಸ್​ನಲ್ಲಿ ಬೇಡಿಕೆಗಿಂತ ಕಡಿಮೆ ಬೇಬಿ ವರ್ಮರ್​​ಗಳ ಕೊರತೆ ಇದೆ. ವೈದ್ಯಕೀಯ ಸಿಬ್ಬಂದಿ ಕೂರತೆ ಕೂಡ ಇದೆ. ಎಸ್​ಎನ್​ಸಿಯುನಲ್ಲಿಯೇ ನಾಲ್ವರು ತಜ್ಞ ವೈದ್ಯರು ಇರಬೇಕು. ಆದರೆ, ಓರ್ವ ವೈದ್ಯ ಮಾತ್ರ ಇದ್ದಾರೆ.  ಐವರು ಸ್ನಾತಕೋತ್ತರ ವಿದ್ಯಾರ್ಥಿಗಳು ಇರಬೇಕು. ಆದರೆ, ಓರ್ವ ಸ್ನಾತಕೋತ್ತರ ವಿದ್ಯಾರ್ಥಿ ಇದ್ದಾರೆ . ಇನ್ನು, ನರ್ಸಿಂಗ್ ಸಿಬ್ಬಂದಿ ಕೂರತೆ ಕೂಡ ಇದೆ. ಈ ಎಲ್ಲ ಕಾರಣಗಳಿಂದ ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿವೆ. ಇನ್ನು, ಕಿಮ್ಸ್​ನಲ್ಲಿ ಬೇಬಿ ವರ್ಮರ್​ಗಳ ಕೊರತೆ ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಕಿಮ್ಸನ್​ನ ಮುಖ್ಯಸ್ಥರು ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರಂತೆ. ಆದರೆ, ಇಲ್ಲಿವರಗೆ ಸರ್ಕಾರ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಲ್ಲ.

ಹುಬ್ಬಳ್ಳಿ ಕಿಮ್ಸ್ ಗೆ ಬೇಕಾದ ಸವಲತ್ತುಗಳನ್ನು ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ನವಜಾತ ಶಿಶುಗಳ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಲಕರಣೆಗಳನ್ನು ಆದಷ್ಟು ಬೇಗನೆ ಸರಬರಾಜು ಮಾಡಿ, ಮಕ್ಕಳ ಜೀವ ಉಳಿಸುವ ಕೆಲಸ ಮಾಡಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *