ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ K 47 ಶೂಟಿಂಗ್ ಜುಲೈನಲ್ಲಿ ಆರಂಭಗೊಂಡಿದ್ದು, ಈಗ ಭರದಿಂದ ಸಾಗುತ್ತಿದೆ. ಸಿನಿಮಾ ಘೋಷಣೆ ಮಾಡಿದಾಗಲೇ ಸುದೀಪ್ ಆರು ತಿಂಗಳಲ್ಲಿ ಚಿತ್ರವನ್ನು ಪೂರ್ಣಗೊಳಿಸಿ ಕ್ರಿಸ್ಮಸ್‌ಗೆ ರಿಲೀಸ್ ಮಾಡುವುದಾಗಿ ಹೇಳಿದ್ದರು. ಇದೀಗ ತಮ್ಮ ಮಾತಿಗೆ ಬದ್ಧವಾಗಿಯೇ ಸಿನಿಮಾ ಬಿಡುಗಡೆ ಖಚಿತಪಡಿಸಿದ್ದಾರೆ.
ಶೂಟಿಂಗ್ ಸ್ಪೀಡ್: 60% ಕೆಲಸ ಪೂರ್ಣ!
“ಇದೀಗಾಗಲೇ 60% ಶೂಟ್ ಮುಗಿದಿದೆ. ಅಕ್ಟೋಬರ್ ವೇಳೆಗೆ ಶೂಟಿಂಗ್ ಸಂಪೂರ್ಣ ಮುಗಿಯಲಿದೆ. ನವೆಂಬರ್‌ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯಲಿದೆ. ಬಳಿಕ ನಾನು ಬಿಲ್ಲ ರಂಗ ಬಾಷ ಸಿನಿಮಾದಲ್ಲಿ ತೊಡಗಿಕೊಳ್ಳುತ್ತೇನೆ. ಆದರೆ, ಕ್ರಿಸ್ಮಸ್‌ಗೆ ‘K 47’ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಸುದೀಪ್ ತಿಳಿಸಿದ್ದಾರೆ.
ಬರ್ತ್‌ಡೇ ಸ್ಪೆಷಲ್ ಅಪ್ಡೇಟ್
ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬ. ಅದಕ್ಕೂ ಮುನ್ನ ಸೆಪ್ಟೆಂಬರ್ 1ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಭರ್ಜರಿ ಸೆಲೆಬ್ರೇಷನ್ ಆಯೋಜಿಸಲಾಗಿದೆ. ಈ ಸಂದರ್ಭ ಅವರು ‘K 47’ ಚಿತ್ರದ ಕುರಿತು ಅಭಿಮಾನಿಗಳಿಗೆ ಸುವಾರ್ತೆ ನೀಡಿದ್ದಾರೆ.
ಡೆವಿಲ್ Vs 45 Vs K 47 – Clash ಅಥವಾ Celebration?
ಕ್ರಿಸ್ಮಸ್ ಸೀಸನ್‌ನಲ್ಲಿ ‘ಡೆವಿಲ್‘45’ ಹಾಗೂ ‘K 47’ ಮೂವೂ ಚಿತ್ರಗಳು ತೆರೆಕಾಣಲಿವೆ. ಇದರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ಲ್ಯಾಶ್ ಖಚಿತ. ಆದರೆ, ಸುದೀಪ್ ಹೇಳುವಂತೆ –
“ನೀವು ಇದನ್ನು ಕಾಂಪಿಟೇಷನ್ ಎಂದರೂ, ಸೆಲೆಬ್ರೇಷನ್ ಎಂದರೂ ನೋಡಬಹುದು. ನಾನು ಸಿನಿಮಾ ಮಾಡೋದು ನನ್ನ ಅಭಿಮಾನಿಗಳಿಗಾಗಿಯೂ, ನಿರ್ಮಾಪಕರಿಗಾಗಿಯೂ, ಥಿಯೇಟರ್ಗಾಗಿಯೂ. ಜುಲೈ 5ರಂದೇ ನಾನು ರಿಲೀಸ್ ಘೋಷಿಸಿದ್ದೆ. ಆ ಸಮಯದಲ್ಲಿ ಯಾರು ಏನು ಅನೌನ್ಸ್ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
ಕ್ರಿಸ್ಮಸ್ ಗಿಫ್ಟ್ ರೆಡಿಯೇ! ಹೀಗಾಗಿ, ಸುದೀಪ್ ಅಭಿಮಾನಿಗಳಿಗೆ ಈ ಕ್ರಿಸ್ಮಸ್ ದೊಡ್ಡ ಉಡುಗೊರೆ ಖಚಿತ. ಬಾಕ್ಸ್ ಆಫೀಸ್‌ನಲ್ಲಿ ಸೆಲೆಬ್ರೇಷನ್ ಆಗುತ್ತದೋ, ಕಾಂಪಿಟೇಷನ್ ಆಗುತ್ತದೋ ನೋಡಬೇಕಿದೆ!
For More Updates Join our WhatsApp Group :




