ಬೆಂಗಳೂರು: ನಗರದಲ್ಲಿ ಒಂದು ಆಟೋರಿಕ್ಷಾದ ಹಿಂಭಾಗದಲ್ಲಿ ಬರೆದಿರುವ “Go Back Hindi Walas” ಎಂಬ ಬರಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪರವಾನಗಿ ಇಲ್ಲದೇ ಅಕ್ರಮವಾಗಿ ಆಟೋ ಓಡಿಸುತ್ತಿರುವ ಹಿಂದಿ ಭಾಷಿಕ ಚಾಲಕರ ವಿರುದ್ಧ ಈ ಸಂದೇಶ ಬರೆದಿರುವುದು ಗಮನ ಸೆಳೆಯುತ್ತಿದೆ.
ಆಟೋ ಹಿಂಭಾಗದಲ್ಲಿ ಹಾಕಿರುವ ಪೋಸ್ಟರ್‌ನಲ್ಲಿ, “ಪರವಾನಗಿ ಇಲ್ಲ “ಪೊಲೀಸ್ ಪರಿಶೀಲನೆ ಇಲ್ಲ”“ಬ್ಯಾಡ್ಜ್ ಇಲ್ಲ “ಅಕ್ರಮ ಆಟೋಗಳು 10,000 ಕ್ಕೂ ಹೆಚ್ಚು”
ಎಂಬ ಮಾಹಿತಿಗಳನ್ನು ಉಲ್ಲೇಖಿಸಿ, ಹಿಂದಿ ಚಾಲಕರು ಹಿಂತಿರುಗಿ ಹೋಗಬೇಕು ಎಂಬ ಸಂದೇಶವನ್ನು ಸ್ಪಷ್ಟವಾಗಿ ಬರೆದಿದ್ದಾರೆ.
ಈ ಫೋಟೋವನ್ನು nammabengaluru ಹೆಸರಿನ ಇನ್‌ಸ್ಟಾಗ್ರಾಂ ಪೇಜ್ ಹಂಚಿಕೊಂಡಿದ್ದು, “ನಿಯಮ ಪಾಲನೆ ಮಾಡುವ ಜನರ ಬಗ್ಗೆ ಇಂತಹ ದ್ವೇಷ ಬೇಡ” ಎಂದು ಶೀರ್ಷಿಕೆ ನೀಡಲಾಗಿದೆ.
ಬಳಕೆದಾರರ ಪ್ರತಿಕ್ರಿಯೆಗಳು ಮಿಶ್ರವಾಗಿದ್ದು, ಕೆಲವರು “ಇದು ದ್ವೇಷ ಮತ್ತು ವಿಭಜನೆಯನ್ನು ಹೆಚ್ಚಿಸುತ್ತದೆ ಎಂದು ಟೀಕಿಸಿದರೆ, ಮತ್ತೊಬ್ಬರು “ಅಕ್ರಮ ಆಟೋಗಳು ಸಮಸ್ಯೆ ಸೃಷ್ಟಿಸುತ್ತಿವೆ, ಇದನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ನೆಟ್ಟಿಗರು ಇಂತಹ ದ್ವೇಷಪೂರ್ಣ ಸಂದೇಶಗಳಿಂದ ಜನರು ಖಾಸಗಿ ವಾಹನಗಳ ಬಳಕೆಗೆ ಒತ್ತಾಯಿತರಾಗುತ್ತಿದ್ದಾರೆ, ಇದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :




