ಕನ್ನಡ ಚಿತ್ರರಂಗವನ್ನು ಸೈಮಾ ವೇದಿಕೆಯಲ್ಲಿ ಕಡೆಗಣಿಸಿದ್ದಾರೆ ಎಂದು ನಟ-ನಿರ್ದೇಶಕ ದುನಿಯಾ ವಿಜಯ್ ಧ್ವನಿ ಎತ್ತಿದ ಘಟನೆಗೆ ಇದೀಗ ಮತ್ತೊಬ್ಬ ಹಿರಿಯ ನಟ ಬೆಂಬಲ ನೀಡಿದ್ದಾರೆ.
ಜನಪ್ರಿಯ ನಟ ರಮೇಶ್ ಅರವಿಂದ್ ಅವರು ದುನಿಯಾ ವಿಜಯ್ ಹೇಳಿಕೆಗೆ ತಮ್ಮ ಸಹಮತ ವ್ಯಕ್ತಪಡಿಸಿದ್ದು,“ಹೈದರಾಬಾದ್ನಲ್ಲಿ ನಡೆದಿದ್ದ ಸೈಮಾ ಕಾರ್ಯಕ್ರಮದಲ್ಲಿ ನನಗೂ ಕೆಟ್ಟ ಅನುಭವ ಎದುರಾಯಿತು. ದುನಿಯಾ ವಿಜಯ್ ಹೇಳಿದ್ದನ್ನು ನಾನು ಸಹ ಅನುಭವಿಸಿದ್ದೇನೆ” ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಈಗಾಗಲೇ ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವ ಸಂದರ್ಭದಲ್ಲಿ, ರಮೇಶ್ ಅರವಿಂದ್ ಅವರ ಈ ಪ್ರತಿಕ್ರಿಯೆ ಚರ್ಚೆಗೆ ಕಾರಣವಾಗಿದೆ.
For More Updates Join our WhatsApp Group :




