ತುಮಕೂರು ಬನಶಂಕರಿ ಅಂಡರ್ ಪಾಸ್ ಸುರಕ್ಷತೆ ಪ್ರಶ್ನೆ.!

ತುಮಕೂರು ಬನಶಂಕರಿ ಅಂಡರ್ ಪಾಸ್ ಸುರಕ್ಷತೆ ಪ್ರಶ್ನೆ.!

ಉದ್ಘಾಟನೆಯ ಕೆಲವೇ ತಿಂಗಳಲ್ಲಿ ಕಂಬಿಗಳು ಹಾಳುವಾಹನ ಸವಾರರಲ್ಲಿ ಆತಂಕ

ತುಮಕೂರು: ಕುಣಿಗಲ್ ರಸ್ತೆಯ ಬನಶಂಕರಿ ಅಂಡರ್ ಪಾಸ್ ಉದ್ಘಾಟನೆಯಾಗಿ ಕೆಲವೇ ತಿಂಗಳಲ್ಲಿ ಕಬ್ಬಿಣದ ಕಂಬಿಗಳ ವೆಲ್ಡಿಂಗ್ ಹಾಳಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮಳೆ ನೀರು ಸರಾಗವಾಗಿ ಹರಿಯಲು ಅಳವಡಿಸಿದ್ದ ಕಂಬಿಗಳ ಗುಣಮಟ್ಟವೇ ಈಗ ಪ್ರಶ್ನಾರ್ಹವಾಗಿದೆ.

ತುಮಕೂರು ನಗರವನ್ನು ಕುಣಿಗಲ್ ಪಟ್ಟಣಕ್ಕೆ ಸಂಪರ್ಕಿಸುವ ಈ ಅಂಡರ್ ಪಾಸ್ ಮಾರ್ಗದಲ್ಲಿ ಬಸ್, ಕಾರು, ಆಟೋ ಹಾಗೂ ಲಾರಿಗಳ ಸಂಚಾರ ನಿರಂತರವಾಗಿದೆ. ಇಂತಹ ಪ್ರಮುಖ ಮಾರ್ಗದಲ್ಲೇ ದುರಸ್ತಿ ಸಮಸ್ಯೆ ಕಂಡುಬಂದಿರುವುದು ಚಿಂತೆ ಹೆಚ್ಚಿಸಿದೆ.

ಹಾಳಾಗಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಅಂಡರ್ ಪಾಸ್‌ನ ಸುರಕ್ಷತೆಯನ್ನು ಖಚಿತಪಡಿಸಲು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *