ಬೆಂಗಳೂರು: ಬೆಂಗಳೂರಿನ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ RDX ಇಟ್ಟಿರೋದಾಗಿ ಇ-ಮೇಲ್ ಬೆದರಿಕೆ ಬಂದಿದೆ. ಶುಕ್ರವಾರ ಪ್ರಾರ್ಥನೆ ವೇಳೆ ಬ್ಲ್ಯಾಸ್ಟ್ ಆಗುತ್ತೆ ಎಂದೂ ಸಹ ಮೇಲ್ನಲ್ಲಿ ತಿಳಿಸಲಾಗಿದೆ. ಜೊತೆಗೆ ಹೈಕೋರ್ಟ್ಗೂ ಬಾಂಬ್ ಇಟ್ಟಿರುವುದಾಗಿಯೂ ಹೇಳಲಾಗಿತ್ತು. ಆದರೆ ಸರ್ಚ್ ಆಪರೇಷನ್ ಬಳಿಕ ಇದು ಹುಸಿ ಬೆದರಿಕೆ ಮೇಲ್ ಎಂಬುದು ದೃಢವಾಗಿದೆ. IP ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
For More Updates Join our WhatsApp Group :




