‘ಕಾಂತಾರ 1’ ವಿಶೇಷ ಶೋ: ರಿಷಬ್ ಶೆಟ್ಟಿ ಆಯೋಜನೆ, KLರಾಹುಲ್ 2 ಬಾರಿ ವೀಕ್ಷಣೆ.

 ‘ಕಾಂತಾರ 1’ ವಿಶೇಷ ಶೋ: ರಿಷಬ್ ಶೆಟ್ಟಿ ಆಯೋಜನೆ, KLರಾಹುಲ್ 2 ಬಾರಿ ವೀಕ್ಷಣೆ.

ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ, ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲದೆ ಸಿನಿಮಾ ಮಂದಿಯನ್ನು ಸಹ ಬಹುವಾಗಿ ಸೆಳೆದಿದೆ. ಅಲ್ಲು ಅರ್ಜುನ್, ಸಂದೀಪ್ ರೆಡ್ಡಿ ವಂಗಾ, ಯಶ್ ಇನ್ನೂ ಹಲವರು ಸಿನಿಮಾ ನೋಡಿ ಕೊಂಡಾಡಿದ್ದಾರೆ. ಸಿನಿಮಾ ಮಂದಿ ಮಾತ್ರವಲ್ಲ ಕ್ರಿಕೆಟಿಗರು ಸಹ ಮುಗಿಬಿದ್ದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದ್ದಾರೆ. ರಿಷಬ್ ಅವರೇ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಅವರ ಕುಟುಂಬಕ್ಕೆ ವಿಶೇಷ ಶೋ ಆಯೋಜಿಸಿದ್ದರಂತೆ. ಈ ಬಗ್ಗೆ ಸ್ವತಃ ಕೆಎಲ್ ರಾಹುಲ್ ಮಾತನಾಡಿದ್ದಾರೆ.

ಇತ್ತೀಚೆಗೆ ಯೂಟ್ಯೂಬರ್​​ ಒಬ್ಬರಿಗೆ ನೀಡಿರುವ ಸಂದರ್ಶನದಲ್ಲಿ ‘ಕಾಂತಾರ’ ಸಿನಿಮಾ ನೋಡಿದ ಬಗ್ಗೆ ರಾಹುಲ್ ಮಾತನಾಡಿದ್ದಾರೆ. ಕೆಎಲ್ ರಾಹುಲ್ ಪ್ರಸ್ತುತ ಕುಟುಂಬದೊಡನೆ ಮುಂಬೈನಲ್ಲಿದ್ದಾರೆ. ಆದರೆ ಮುಂಬೈನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹಿಂದಿ ಆವೃತ್ತಿಗಳು ಮಾತ್ರ ಇದ್ದವಂತೆ. ರಿಷಬ್​​ಗೆ ಈ ಬಗ್ಗೆ ಹೇಳಿದಾಗ ಕೆಎಲ್ ರಾಹುಲ್​​ಗಾಗಿ ಮುಂಬೈನಲ್ಲಿ ವಿಶೇಷವಾಗಿ ಕನ್ನಡ ಶೋ ಅನ್ನು ಆಯೋಜಿಸಿದರಂತೆ ರಿಷಬ್ ಶೆಟ್ಟಿ. ಇತ್ತೀಚೆಗಷ್ಟೆ ರಿಷಬ್ ಶೆಟ್ಟಿ, ಪ್ರಗತಿ ಅವರುಗಳು ಸುನಿಲ್ ಶೆಟ್ಟಿ ಹಾಗೂ ಇತತರೊಟ್ಟಿಗೆ ಫೋಟೊ ಹಂಚಿಕೊಂಡಿದ್ದರು. ಅಸಲಿಗೆ ಅದು ಸಿನಿಮಾದ ವಿಶೇಷ ಶೋ ಆಯೋಜಿಸಿದಾಗಿನ ಫೋಟೊವೇ ಆಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *