ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬೈಕ್ ಟಚ್ ಆದಕ್ಕೆ ಸ್ವಾಫ್ಟ್‌ವೇರ್ ಉದ್ಯೋಗಿ ಮೇಲೆ ಮಾರಣಾಂತಿಕ ಹ*ಲ್ಲೆ.

ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬೈಕ್ ಟಚ್ ಆದಕ್ಕೆ ಸ್ವಾಫ್ಟ್‌ವೇರ್ ಉದ್ಯೋಗಿ ಮೇಲೆ ಮಾರಣಾಂತಿಕ ಹ*ಲ್ಲೆ.

ಬೆಂಗಳೂರು: ಬೈಕ್​ ಟಚ್​ ಆಗಿದೆ ಎಂಬ ಕಾರಣಕ್ಕೆ ಕಚೇರಿಗೆ ತೆರಳುತ್ತಿದ್ದ ಸ್ವಾಫ್ಟ್​ವೇರ್​ ಉದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ. ಸ್ವಾಫ್ಟ್​ವೇರ್​ ಉದ್ಯೋಗಿ ಪ್ರತೀಕ್​ ಎಂಬಾತ  ನಿನ್ನೆ ಕಚೇರಿಗೆ ತೆರಳುತ್ತಿದ್ದ ವೇಳೆ ಇವರ ಬೈಕ್​ ಮತ್ತೊಂದು ಬೈಕ್​ಗೆ ಟಚ್​ ಆಗಿದೆ.

ಇದೇ ಕಾರಣಕ್ಕೆ ಪ್ರತೀಕ್​ ಬೈಕ್​ ಕೀ ಕಿತ್ತುಕೊಳ್ಳಲಾಗಿದ್ದು, ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ಬಗ್ಗೆ ದೂರು ನೀಡಲು ಬಂದಾಗ ಕಂಪ್ಲೇಂಟ್​ ಪಡೆಯಲು ಪುಟ್ಟೇನಹಳ್ಳಿ ಪೊಲೀಸರು 2 ಗಂಟೆಗಳ ಕಾಲ ಕಾಯಿಸಿರುವ ಆರೋಪವೂ ಕೇಳಿಬಂದಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *