ಬೆಂಗಳೂರಿನಲ್ಲಿ ಫೆ.14 ವಿದ್ಯುತ್ ವ್ಯತ್ಯಯ.

ಬೆಂಗಳೂರಿನಲ್ಲಿ ಫೆ.14 ವಿದ್ಯುತ್ ವ್ಯತ್ಯಯ.

ನಿರ್ವಹಣಾ ಕಾಮಗಾರಿಗೆ ಬೆಸ್ಕಾಂ ಸೂಚನೆ.

ಬೆಂಗಳೂರು: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಫೆಬ್ರವರಿ 14 ಶನಿವಾರದಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ವಿವಿಧೆಡೆ ವಿದ್ಯುತ್​​ ಸರಬರಾಜಲ್ಲಿವ್ಯತ್ಯಯವಾಗಲಿದೆ. ಹೀಗಾಗಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ತುಮಕೂರಿನ  ಶಿರಾ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿಯೂ ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್​​ ವ್ಯತ್ಯಯ

  • ಜಾಲಹಳ್ಳಿ: ಡಿಬಿ ಸಂದ್ರ 2ನೇ ಮತ್ತು 4ನೇ ಬ್ಲಾಕ್, ಜೆಬಿ ಕಾವಲ್ ಟ್ರೀ ಪಾರ್ಕ್, ಗಂಗಮ್ಮ ಸರ್ಕಲ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಮತ್ತು ದಕ್ಷಿಣ ಕಾಲೋನಿ, ಬಾಹುಬಲಿ ನಗರ, ಬ್ಲೂಮ್‌ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಎಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್, ಪ್ರೆಸ್ಟೀಜ್ ಕೆನ್ಸಿಂಗ್ಟನ್, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್​​ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯವಾಗಲಿದೆ.
  • ದೊಮ್ಮಲೂರು: ದೊಮ್ಮಲೂರು 2ನೇ ಹಂತ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್‌ಎಎಲ್ 2ನೇ ಹಂತ (6ನೇ ಮೇನ್​ ವರೆಗೆ), ಇಎಸ್‌ಐ ಆಸ್ಪತ್ರೆ, 100 ಅಡಿ ರಸ್ತೆ, ಸಲಾರ್ಪುರಿಯಾ ಜಿಆರ್ ಟೆಕ್ ಪಾರ್ಕ್, ಜೆಆರ್‌ಆರ್ ಲೇಔಟ್, ಡೈಮಂಡ್ ಡಿಸ್ಟ್ರಿಕ್ಟ್ ಪ್ರದೇಶದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯವಾಗಲಿದೆ.
  • ಮೈಸೂರು ರಸ್ತೆ: ಶಾಮಣ್ಣ ಗಾರ್ಡನ್, ಮಂಜುನಾಥ ನಗರ, ಪೈಪ್‌ಲೈನ್ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ನ್ಯೂ ಗುಡ್ಡದಹಳ್ಳಿ, ಕುವೆಂಪು ನಗರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗ ವಿದ್ಯುತ್​​ ಸರಬರಾಜು ಇರಲ್ಲ.
  • ನೃಪತುಂಗ ರಸ್ತೆ: ಕುಬ್ಬನ್‌ಪೇಟೆ 3ನೇ, 4ನೇ, 5ನೇ, 6ನೇ ಕ್ರಾಸ್, 13ನೇ, 14ನೇ ಮತ್ತು 15ನೇ ಕ್ರಾಸ್, ಆರ್‌ಬಿಐ, ಯು‌ವಿ‌ಸಿ‌ಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಸೇಂಟ್ ಮಾರ್ತಾ ಆಸ್ಪತ್ರೆ, ನಾಗರ್ತಪೇಟೆ ಮುಖ್ಯ ರಸ್ತೆ, ಕೆಎಎಸ್ ಲೇನ್, ಕೆಜಿ ರಸ್ತೆ, ಓಟಿಸಿ ರಸ್ತೆ, ಶಾರದಾ ಥಿಯೇಟರ್, ಎಸ್‌ಪಿ ರಸ್ತೆ, ಎಸ್‌ಜೆಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ ಪ್ರದೇಶದಲ್ಲಿಯೂ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯವಾಗಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *