ಬಡರೋಗಿಗಳ ಪರದಾಟಕ್ಕೆ NHM ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ.
ಬೆಂಗಳೂರು: ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಬಡರೋಗಿಗಳ ಜೇಬಿಗೆ ಕತ್ತರಿ ಹಾಕಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 13 ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದ ಉಚಿತ ಸ್ಕ್ಯಾನಿಂಗ್ ಏಕಾಏಕಿ ಸ್ಥಗಿತವಾಗಿತ್ತು. ಬಡರೋಗಿಗಳ ಪರ ನಿಮ್ಮ ಟಿವಿ9 ಸುದ್ದಿ ಪ್ರಸಾರ ಬೆನ್ನಲ್ಲೇ ಎತ್ತಚ್ಚ ಆರೋಗ್ಯ ಇಲಾಖೆ ಇದೀಗ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.
ಉಚಿತ ಸ್ಕ್ಯಾನಿಂಗ್ಗೆ ಪರ್ಯಾಯ ವ್ಯವಸ್ಥೆ
ಬಡ ರೋಗಿಗಳಿಗೆ ಅನುಕೂಲವಾಗ್ತಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿದ್ದ Ct -MRI ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಉಚಿತ ಸೇವೆಯನ್ನ ಏಕಾಏಕಿ ನಿಲ್ಲಿಸಿದ್ದರಿಂದ ಬಡರೋಗಿಗಳ ಜೇಬಿಗೆ ಕತ್ತರಿ ಬಿದ್ದಿತ್ತು. ಹಣ ಕೊಟ್ಟು ಸ್ಕ್ಯಾನಿಂಗ್ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾವಾಗಿತ್ತು. ಬಡರೋಗಿಗಳಿಗಾಗ್ತಿದ್ದ ಅನ್ಯಾಯದ ವಿರುದ್ಧ ಟಿವಿ9 ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು. ಕ್ರಶ್ನಾ ಡೈಯಾಗ್ಲೋಸ್ಟಿಕ್ಗೆ ಸರ್ಕಾರ ಬಾಕಿ ಹಣ ಪಾವತಿಮಾಡದ ಹಿನ್ನೆಲೆ ಉಚಿತ ಸೇವೆ ನಿಲ್ಲಿಸಿರೋದನ್ನ ಪ್ರಶ್ನೆ ಮಾಡಿ ಸರ್ಕಾರದಲ್ಲಿ ಬಡವರ ಆರೋಗ್ಯಕ್ಕೆ ಹಣ ಇಲ್ವಾ ಎಂದು ಸರ್ಕಾರಕ್ಕೆ ಬಿಸಿಮುಟ್ಟಿಸಲಾಗಿತ್ತು.
ಇನ್ನು ಸ್ಕ್ಯಾನಿಂಗ್ ಸೌಲಭ್ಯ ನಿರ್ವಹಣೆ ಮಾಡ್ತಿದ್ದ ಕ್ರಶ್ನಾ ಡೈಯಾಗ್ನೋಸ್ಟಿಕ್ ಕಂಪನಿ, ಈ ಹಿಂದೆ ಮೇಲ್ ಮೂಲಕ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ ಪಾವತಿಸಬೇಕಿರೋ 143.78 ಕೋಟಿ ರೂ ಬಾಕಿ ಹಣ ಬಿಡುಗಡೆ ಮಾಡದೆ ಇದ್ರೆ ಉಚಿತ ಸೇವೆ ನಿಲ್ಲಿಸೋದಾಗಿ ಎಚ್ಚರಿಸಿತ್ತು. ಕಂಪನಿಯ ಆರ್ಥಿಕ ಸ್ಥಿತಿಯನ್ನ ಪ್ರಸ್ತಾಪಿಸಿ ಫೆಬ್ರುವರಿ 17 ರೊಳಗೆ ಕನಿಷ್ಟ 50 ಕೋಟಿ ರೂ ಹಣ ಪಾವತಿ ಮಾಡದೆ ಇದ್ರೆ ಉಚಿತ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷವಹಿಸಿದ್ದರು.
For More Updates Join our WhatsApp Group :




