ಕೋರ್ಟ್ ಮೆಟ್ಟಿಲೇರಿತು ಬೆಂಗಳೂರು ವಿಮಾನ ನಿಲ್ದಾಣದ ಅಪರೂಪದ ಪ್ರಕರಣ.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಟುಂಬವೊಂದಕ್ಕೆ ಪೆರು ದೇಶಕ್ಕೆ ತೆರಳಲು ವಿಮಾನ ಏರಲು ಅವಕಾಶ ನೀಡದೇ ಇರುವ ಅಪರೂಪದ ಘಟನೆ ಕಾನೂನು ಸಮರಕ್ಕೆ ಕಾರಣವಾಗಿದೆ.ಈ ಸಂಬಂಧ ವಿಮಾನಯಾನ ಸಂಸ್ಥೆಯ ಸಿಇಒ ಮತ್ತು ಸಿಒಒ ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೇವನಹಳ್ಳಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಏನಿದು ಘಟನೆ?
ತಮಿಳುನಾಡಿನ ಸೇಲಂ ಮೂಲದ ವೈದ್ಯಕೀಯ ಸಂಸ್ಥೆಯೊಂದರ ಅಧ್ಯಕ್ಷ ಜೆ.ಎಸ್. ಸತೀಶ್ ಕುಮಾರ್ ತಮ್ಮ ಕುಟುಂಬದ ಎಂಟು ಸದಸ್ಯರೊಂದಿಗೆ ಪೆರು ಪ್ರವಾಸಕ್ಕೆ ಯೋಜಿಸಿದ್ದರು. ಇದಕ್ಕಾಗಿ ಸುಮಾರು 49 ಲಕ್ಷ ರೂಪಾಯಿ ವೆಚ್ಚ ಮಾಡಿ ಬಿಸಿನೆಸ್ ಕ್ಲಾಸ್ ಟಿಕೆಟ್ಗಳನ್ನು ಬುಕ್ ಮಾಡಿದ್ದರು. 2024ರ ಜೂನ್ 19 ರಂದು ಬೆಂಗಳೂರಿನಿಂದ ವಿಮಾನ ಏರಲು ಸಿದ್ಧರಾಗಿದ್ದ ಇವರಿಗೆ, ಕೊನೆಯ ಕ್ಷಣದಲ್ಲಿ ಪೆರು ವೀಸಾ ಇಲ್ಲ ಎಂಬ ಕಾರಣ ನೀಡಿ ವಿಮಾನ ಏರಲು ಸಿಬ್ಬಂದಿ ತಡೆದಿದ್ದರು.
‘ರೆಡ್ ಫ್ಲ್ಯಾಗ್’ ಎಂದರೇನು?
ಅಂತರಾಷ್ಟ್ರೀಯ ಪ್ರಯಾಣದಲ್ಲಿ ‘ರೆಡ್ ಫ್ಲ್ಯಾಗಿಂಗ್ ಎಂದರೆ ಒಬ್ಬ ಪ್ರಯಾಣಿಕನನ್ನು ‘ಹೆಚ್ಚಿನ ನಿಗಾ ವಹಿಸಬೇಕಾದ ವ್ಯಕ್ತಿ’ ಎಂದು ವಿಮಾನಯಾನ ಸಂಸ್ಥೆಗಳು ಅಥವಾ ವಲಸೆ ಅಧಿಕಾರಿಗಳ ಡೇಟಾಬೇಸ್ನಲ್ಲಿ ಗುರುತು ಮಾಡುವುದು. ಇದು ಒಂದು ರೀತಿಯ ಡಿಜಿಟಲ್ ಎಚ್ಚರಿಕೆಯಾಗಿದ್ದು, ಪ್ರಯಾಣಿಕನು ಈ ಹಿಂದೆ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ, ಗಡಿಪಾರು ಆಗಿದ್ದಾನೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಸಂಕೇತವನ್ನು ನೀಡುತ್ತದೆ. ಒಮ್ಮೆ ಈ ರೀತಿ ‘ರೆಡ್ ಫ್ಲ್ಯಾಗ್’ ಆದರೆ, ಆ ಪ್ರಯಾಣಿಕನು ಯಾವುದೇ ದೇಶಕ್ಕೆ ಹೋದರೂ ವಿಮಾನ ನಿಲ್ದಾಣಗಳಲ್ಲಿ ತೀವ್ರ ವಿಚಾರಣೆ, ತಪಾಸಣೆ ಮತ್ತು ಪದೇ ಪದೇ ಬೋರ್ಡಿಂಗ್ ನಿರಾಕರಣೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
For More Updates Join our WhatsApp Group :




