ಮಧ್ಯಪ್ರಾಚ್ಯ ಯುದ್ಧದ ಪರಿಣಾಮ? ರಾಜ್ಯದಲ್ಲಿ ಇಂಧನ ಕೊರತೆ ಆತಂಕ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ? ರಾಜ್ಯದಲ್ಲಿ ಇಂಧನ ಕೊರತೆ ಆತಂಕ

ಪೆಟ್ರೋಲ್ ಬಂಕ್ಗಳ ಬಳಿ ವಾಹನಗಳ ಮುಗಿಬಿದ್ದು

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ದೇಶದ ಹಲವೆಡೆ ಈಗಾಗಲೇ LPG ಸಿಲಿಂಡರ್​​ಗಳ ಕೊರತೆ ಎದುರಾಗಿದೆ. ಈ ನಡುವೆ ಪೆಟ್ರೋಲ್​​, ಡೀಸೆಲ್​​ ಸೇರಿ ಇಂಧನಗಳ ಕೊರತೆಯೂ ಉಂಟಾಗುವ ಸಾಧ್ಯತೆ ಹಿನ್ನೆಲೆ ಜನ ಸಾಮಾನ್ಯರು ಆತಂಕಗೊಂಡಿದ್ದಾರೆ. ಮುಂಚಿತವಾಗಿ ಅಗತ್ಯ ಇಂಧನ ದಾಸ್ತಾನಿಗೆ ಮುಂದಾಗ್ತಿದ್ದು, ಕೆಲವೆಡೆ ಪೆಟ್ರೋಲ್​​ ಬಂಕ್​​ಗಳಿಗೆ ವಾಹನಗಳ ಮಾಲಕರು ಮುಗಿಬಿದ್ದ ಘಟನೆಗಳು ವರದಿಯಾಗಿವೆ. ಕೆಲವರು ನೀರಿನ ಟ್ಯಾಂಕ್​​ಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗುತ್ತಿರುವ ವಿಡಿಯೋಗಳೂ ವೈರಲ್​​ ಆಗಿವೆ. ಈ ನಡುವೆ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್​​, ಡೀಸೆಲ್​ ಕೊರತೆ ಇಲ್ಲ ಎಂದು ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ತಿಳಿಸಿದೆ.

ರಾಜ್ಯದ ಎಲ್ಲಿಯೂ ಪೆಟ್ರೋಲ್, ಡೀಸೆಲ್ಕೊರತೆ ಇಲ್ಲ. ಭಾರತ ಪೆಟ್ರೋಲಿಯಂ,ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸೇರಿ ಸಾರ್ವಜನಿಕ ಕ್ಷೇತ್ರದ ಮೂರು ತೈಲ ಮಾರಾಟ ಸಂಸ್ಥೆಗಳಲ್ಲಿ ತೈಲ ಸಂಗ್ರಹವಿದೆ. ರಾಜ್ಯದ ಎಲ್ಲಾ ಟರ್ಮಿನಲ್‌ಗಳು ಮತ್ತು ಡಿಪೋಗಳಲ್ಲಿ ಸಮರ್ಪಕ, ನಿರಂತರ ಇಂಧನ ಸಂಗ್ರಹವನ್ನು ಮಾಡಲಾಗಿದೆ. ಇದಕ್ಕೂ ಮೇಲಾಗಿ ಕರ್ನಾಟಕದಾದ್ಯಂತ ಇರುವ ಎಲ್ಲ ಪೆಟ್ರೋಲ್ ಬಂಕ್‌ಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದ್ದು, ಗ್ರಾಹಕರ ನಿಯಮಿತ ಬೇಡಿಕೆಯನ್ನು ಪೂರೈಸಲು ಸಿದ್ಧವಿದ್ದೇವೆ ಎಂದು ತಿಳಿಸಿದೆ.

ಸಾರ್ವಜನಿಕರಿಗೆ ಮನವಿ

ಇಂಧನಗಳ ಅಭಾವ ಉಂಟಾಗುವ ಬಗ್ಗೆ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ರಾಜ್ಯದಾದ್ಯಂತ ಇಂಧನ ಸರಬರಾಜು ವ್ಯವಸ್ಥೆ ಸ್ಥಿರವಾಗಿ, ಸಮನ್ವಯ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.  ತೈಲ ಮಾರಾಟ ಕಂಪನಿಗಳ ಜೊತೆ ಫೆಡರೇಷನ್ ನಿರಂತರ ಸಂಪರ್ಕದಲ್ಲಿದೆ. ಪೆಟ್ರೋಲ್​ ಡೀಲರ್​​ಗಳು ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸಬೇಕು ಎಂದೂ ಮನವಿ ಮಾಡುತ್ತೇವೆ ಎಂದು AKFPT ಹೇಳಿದೆ. ಅಲ್ಲದೆ, ಪೆಟ್ರೋಲ್​​ ಮತ್ತು ಡೀಸೆಲ್​​​ ಪೂರೈಕೆಯಲ್ಲಿ ಗ್ರಾಹಕರಿಗೆ ಸಮಸ್ಯೆ ಆಗದಂತೆ ಇಂಧನ ಪೂರೈಸುವ ಭರವಸೆಯನ್ನೂ ಮಾಧ್ಯಮ ಪ್ರಕಟಣೆ ಮೂಲಕ AKFPT ನೀಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *