48 ಮಾದರಿಗಳಲ್ಲಿ 18 ಕಳಪೆ; ಜನರಲ್ಲಿ ಆತಂಕ, ಜಿಲ್ಲಾಡಳಿತ ಕಠಿಣ ಕ್ರಮ.
ಕೋಲಾರ: ಕಲಬೆರಕೆ ಹಾಲಿನ ವಿರುದ್ಧ ಸಮರ ಸಾರಿದ್ದ ಜಿಲ್ಲಾಡಳಿತ ಹಲವು ಹಳ್ಳಿಗಳಲ್ಲಿ ದಾಳಿ ನಡೆಸಿ ಹಾಲು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು, 18 ಕಡೆ ಸಂಗ್ರಹಿಸಿದ್ದ ಹಾಲು ಕಲಬೆರಕೆ ಎನ್ನುವ ಆಘಾತಕಾರಿ ವರದಿ ಬಹಿರಂಗವಾಗಿದೆ. ಸದ್ಯ ಈ ವಿಚಾರ ಕೋಲಾರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಕ್ಷೀರಕಾಂತ್ರಿ ಮೂಲಕ ಬಯಲು ಸೀಮೆಯಲ್ಲಿ ಹಾಲಿನ ಹೊಳೆ ಹರಿಸಿದ ಕೀರ್ತಿ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಲ್ಲುತ್ತದೆ. ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಹೈನೋದ್ಯಮವನ್ನಾಗಿ ಪರಿವರ್ತಿಸುವ ಮೂಲಕ ಜಿಲ್ಲೆಯಲ್ಲಿ ಹಾಲು ಉದ್ಯಮವನ್ನಾಗಿ ಮಾಡಿದ ಕೀರ್ತಿ ಸಹ ಕೋಲಾರ ಜಿಲ್ಲೆಯ ಗೋಪಾಲಕರಿಗೆ ಸಲ್ಲುತ್ತದೆ. ಇಂಥ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಹಾಲಿಗೆ ವಿಷ ಬೆರೆಸುವ ಕಲಬೆರಕೆ ಪ್ರಕರಣಗಳು ಕೇಳಿ ಬಂದ ಹಿನ್ನೆಲೆ ಫೆಬ್ರವರಿ 5 ರಂದು ಕೋಲಾರ ಜಿಲ್ಲಾಡಳಿತ ಕಲಬೆರಕೆ ಹಾಲಿನ ವಿರುದ್ದ ಸಮರ ಸಾರಿತ್ತು..
ಇನ್ನು ಕೋಲಾರ ಜಿಲ್ಲೆಯ ಗಡಿಗೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ಹೊಂದಿಕೊಂಡಿವೆ. ಈ ಕಾರಣದಿಂದ ಆಂಧ್ರ ಮತ್ತು ತಮಿಳುನಾಡಿನ ಖಾಸಗಿ ಡೈರಿಗಳಾದ ಕಾಂತರಾಜ ಸರ್ಕಲ್ನಲ್ಲಿರುವ ತಿರುಮಲ ಡೈರಿ, ಲಿಂಗಾಪುರದ ಸಂತೃಷ್ಠಿ ಡೈರಿ, ತಲಗುಂದ ಕ್ರಾಸ್ನಲ್ಲಿನ ಹಟ್ ಸನ್ ಡೈರಿ, ಪೀಲವಾರ ಗ್ರಾಮದ ಬಳಿಯ ದೊಡ್ಲ ಡೈರಿ, ತಿಮ್ಮರಾವುತ್ತನಹಳ್ಳಿ ಗ್ರಾಮದ ಬಳಿಯ ಅಮುಲ್ ಡೈರಿ, ಕೊಂಡಿಹಳ್ಳಿ ಬಳಿಯ ಶ್ರೀಜ ಡೈರಿ, ಗುಮ್ಮಕಲ್ ಗ್ರಾಮದ ಪರಾಗ್ ಮಿಲ್ಕ್ ಡೈರಿಗಳಲ್ಲಿ ಸಂಗ್ರಹಿಸಿದ್ದ ಹಾಲಿನಲ್ಲಿ ಕಲಬೆರಕೆ ಹಾಗೂ ಕಳಪೆ ಗುಣಮಟ್ಟ ಇರುವುದು ಕಂಡು ಬಂದಿದೆ.
For More Updates Join our WhatsApp Group :




