ಬಂಧಿತ ಯುವಜನರ ಬಿಡುಗಡೆಗೆ ರವಿಕುಮಾರ್ ಆಗ್ರಹ.!

ಬಂಧಿತ ಯುವಜನರ ಬಿಡುಗಡೆಗೆ ರವಿಕುಮಾರ್ ಆಗ್ರಹ.!

ಬಂಧಿತ ಯುವಕರ ಬಿಡುಗಡೆಗೆ ಬಿಜೆಪಿ ಆಗ್ರಹ.

ಬೆಂಗಳೂರು: ಧಾರವಾಡದಲ್ಲಿ ಬಂಧಿತ ಪ್ರತಿಭಟನಾನಿರತ ನಿರುದ್ಯೋಗಿ ಯುವಜನರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಬಿಜೆಪಿ ಕೂಡ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಎಚ್ಚರಿಸಿದ್ದಾರೆ.

ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ನಿರುದ್ಯೋಗಿ ಯುವಜನರು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಹೋರಾಟ ಮಾಡಿದ್ದಾರೆ. ಸರಕಾರ ಕೋರ್ಟಿನ ನೆಪ ಹೇಳಿ ಉದ್ಯೋಗ ಭರ್ತಿ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು. ಕೂಡಲೇ ಉದ್ಯೋಗ ನೀಡಬೇಕು; ನಿರುದ್ಯೋಗಿ ಯುವಜನರನ್ನು ಮಾತುಕತೆಗೆ ಕರೆದು ಉದ್ಯೋಗ ಭರ್ತಿ ಮಾಡಿ ಎಂದು ಒತ್ತಾಯಿಸಿದರು.

56 ಸಾವಿರ ಜನರನ್ನು ಉದ್ಯೋಗಕ್ಕೆ ಭರ್ತಿ ಮಾಡುವುದಾಗಿ ಸರಕಾರ ತಿಳಿಸಿತ್ತು. ಆದರೆ, ಅದನ್ನು ಮಾಡಿಲ್ಲ. 2 ಲಕ್ಷದ 84 ಸಾವಿರ ಹುದ್ದೆಗಳು ಖಾಲಿ ಇವೆ. ಆದರೆ, ಸರಕಾರ ಖಜಾನೆ ಖಾಲಿ ಮಾಡಿಕೊಂಡು ಕುಂಟು ನೆಪ ಹೇಳುತ್ತಿದೆ ಎಂದು ದೂರಿದರು. ವೇತನ ನೀಡಲು ಇವರ ಬಳಿ ಹಣ ಇಲ್ಲ ಎಂದು ಆಕ್ಷೇಪಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *