ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಾಂಸ್ಕೃತಿಕ ಪರಂಪರೆಯ ತಾಣಗಳಾಗಬೇಕು : ಡಾ. ಚಂದ್ರಶೇಖರ್ S.D

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಾಂಸ್ಕೃತಿಕ ಪರಂಪರೆಯ ತಾಣಗಳಾಗಬೇಕು : ಡಾ. ಚಂದ್ರಶೇಖರ್ S.D

ಶಿಬಿರಗಳು ಪರಂಪರೆ ಉಳಿಸುವ ವೇದಿಕೆಗಳಾಗಬೇಕು – ಡಾ. ಚಂದ್ರಶೇಖರ್ ಎಸ್.ಡಿ

ತಿಪಟೂರು: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಸಾಂಸ್ಕೃತಿಕ ಪರಂಪರೆಯ ತಾಣಗಳಾಗಬೇಕು. ಶಿಬಿರಾರ್ಥಿಗಳು ರಾಷ್ಟಿçÃಯ ಸೇವಾ ಯೋಜನೆಯನಲ್ಲಿ ಸಮಯ ಪರಿಪಾಲನೆ, ಸಾಮಾಜಿಕ ಹೊಂದಾಣಿಕೆ, ಜವಾಬ್ದಾರಿಗಳನ್ನು ಕಲಿಯುವ ಜೊತೆಗೆ ನೆಲದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕೆಂದು ನವೋದಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಎಸ್.ಡಿ ತಿಳಿಸಿದರು.

ಶ್ರೀಮದ್ ರಂಭಾಪುರಿ ಮಠದ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ಅಕ್ಕಮಹಾದೇವಿ ಕಾರ್ಯಕ್ರಮದ ನಾಲ್ಕನೇ ದಿನ ‘ಕನ್ನಡ ಭಾಷೆ ಮತ್ತು ಪರಂಪರೆ’ ಕುರಿತು ಮಾತನಾಡಿ ಕಲಿಕೆ ಮತ್ತು ಗ್ರಹಿಕೆ ಕನ್ನಡ ಪರಂಪರೆ ಒಳಗಡೆ ಹೆಚ್ಚು ಬೆರೆತುಕೊಂಡಿರುವುದರಿAದ ಪ್ರತಿಯೊಬ್ಬ ವಿದ್ಯಾರ್ಥಿಯು ಸಾಂಸ್ಕೃತಿಕ ನಾಯಕನಾಗುತ್ತಾನೆ. ಜನಪದ ದೇಸಿಯ ಪರಿಕಲ್ಪನೆ ಶಿಬಿರದಲ್ಲಿ ಬೆರೆತುಕೊಂಡಿರುವುದರಿAದ ಸಾಂಪ್ರದಾಯಿಕ ಮತ್ತು ವೈಜ್ಙಾನಿಕ ಎರಡು ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ಸಮಾಜಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀ. ಸೈಯದ್ ರಿಯಾಜ್ ಪಾಷಾ ಅವರು ರಾಷ್ಟಿçÃಯ ಸೇವಾ ಯೋಜನೆಯು ರಾಷ್ಟçಮಟ್ಟದ ಕುಟುಂಬವಿದ್ದAತೆ ವಿದ್ಯಾರ್ಥಿಗಳು ಪದವಿ ಮುಗಿದ ನಂತರ ರಾಷ್ಟಿçÃಯ ಸೇವಾ ಯೋಜನೆಯ ಕಲಿತ ವಿದ್ಯೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ತಿಳಿಯಬೇಕು. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತಿವಹಿಸಿಕೊಳ್ಳಬೇಕು ಸೇವೆಯನ್ನು ಸೀಮಿತ ವ್ಯಾಪ್ತಿಯಲ್ಲಿ ನೋಡಬೇಡಿರೆಂದರು.ಶಿಬಿರಾಧಿಕಾರಿಗಳಾದ ಮೋಹನ ಕುಮಾರ ಎಚ್.ಆರ್, ತುಕಾರಾಮ ವಿ, ಭಾರತಿ ವೈ.ಕೆ, ಸ್ಮಿತಾ ಹೆಚ್.ಎಸ್ ಮತ್ತು ಸಹ ಶಿಬಿರಾಧಿಕಾರಿಗಳಾದ ಡಾ. ವೆಂಕಟೇಶ್ ಮತ್ತು ಜಾಯಿದಾಬಿ ಖಾನಬೋಗಿ ಹಾಜರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *