ಕನಿಷ್ಠ ದರ 36ರಿಂದ 50ಕ್ಕೆ ಏರಿಕೆ ಬೇಡಿಕೆ; ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಸಾಧ್ಯತೆ.!
ಬೆಂಗಳೂರು: ರಾಜಧಾನಿಯಲ್ಲಿ ಆಟೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಆಟೋ ಎಲ್‌ಪಿಜಿ ದರವನ್ನು ಪ್ರತಿ ಲೀಟರ್ಗೆ 5.73 ರೂ. ಏರಿಕೆ ಮಾಡಿರುವುದನ್ನು ವಿರೋಧಿಸಿರುವ ಚಾಲಕರು, ಪ್ರಯಾಣ ದರ ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಇತ್ತೀಚೆಗೆ ಎಲ್‌ಪಿಜಿ ಕೊರತೆಯಿಂದ ಚಾಲಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಿಸಿದ್ದರು. ಇದೀಗ ಸರ್ಕಾರಿ ಬಂಕ್‌ಗಳಲ್ಲಿ ಬೆಲೆ ಏರಿಕೆ ನಡೆದಿದ್ದು, ಖಾಸಗಿ ಬಂಕ್‌ಗಳಲ್ಲೂ ದರ ಹೆಚ್ಚಳವಾಗಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಕನಿಷ್ಠ ದರ 36 ರೂ. ಇದ್ದು, ಇದನ್ನು 50 ರೂ.ಗೆ ಹಾಗೂ ಪ್ರತಿ ಕಿ.ಮೀಗೆ 18 ರೂ. ಇದ್ದ ದರವನ್ನು 25 ರೂ.ಗೆ ಹೆಚ್ಚಿಸಲು ಸಂಘಟನೆಗಳು ಆಗ್ರಹಿಸಿವೆ. ಸಾರಿಗೆ ಸಚಿವರು ತಕ್ಷಣ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಚಾಲಕರ ಸಂಘಟನೆಗಳು ಒತ್ತಾಯಿಸಿವೆ.
For More Updates Join our WhatsApp Group :




