ಮತ್ತಿಕೆರೆ-ಬಿಇಎಲ್ ರಸ್ತೆ ಪರಿಶೀಲನೆ – ಮೇ 10ರೊಳಗೆ ಪೈಪ್ಲೈನ್ ಕಾಮಗಾರಿ ಮುಗಿಸಲು ಡೆಡ್ಲೈನ್
ಬೆಂಗಳೂರು : ಸದಾಶಿವನಗರ ಪೊಲೀಸ್ ಠಾಣೆಯಿಂದ ಹೊರವರ್ತುಲ ರಸ್ತೆವರೆಗೆ ಸುಮಾರು 3.55 ಕಿಮೀ ವ್ಯಾಪ್ತಿಯ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ *ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ತಿಳಿಸಿದರು.
ಇಂದು ಬೆಳಿಗ್ಗೆ ಮಲ್ಲೇಶ್ವರಂ ವಿಭಾಗದ ಮತ್ತಿಕೆರೆ ಉಪವಿಭಾಗ ವ್ಯಾಪ್ತಿಯ ನ್ಯೂ ಬಿ.ಇ.ಎಲ್ ರಸ್ತೆ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಡಾಂಬರೀಕರಣ ಕಾಮಗಾರಿಯಲ್ಲಿ ಉಂಟಾಗಿರುವ ವಿಳಂಬವು ಜಲಮಂಡಳಿ ಪೈಪ್ ಲೈನ್ ಕಾಮಗಾರಿಯಿಂದಾಗಿದ್ದು, ಅದನ್ನು ಮೇ 10, 2026ರೊಳಗೆ ಪೂರ್ಣಗೊಳಿಸಲು ಸೂಚಿಸಿ, ತಕ್ಷಣವೇ ಡಾಂಬರೀಕರಣ ಕೈಗೊಳ್ಳುವಂತೆ ನಿರ್ದೇಶಿಸಿದರು.
ಅನಧಿಕೃತ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಕ್ರಮ: ಟ್ರೇಡ್ ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ, ಅವುಗಳ ವಿರುದ್ಧ ದಂಡ ವಿಧಿಸುವಂತೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಪರಿಶೀಲನೆ ವೇಳೆ ನೀಡಲಾದ ಪ್ರಮುಖ ನಿರ್ದೇಶನಗಳು:
• ಚಿಕ್ಕಮಾರನಹಳ್ಳಿಯಿಂದ ಹೊರವರ್ತುಲ ರಸ್ತೆಯವರೆಗಿನ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
• ಪಾದಚಾರಿ ಮಾರ್ಗಗಳಲ್ಲಿ ಅತಿಕ್ರಮಣಗಳನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ನಿರ್ದೇಶಿಸಿದರು.
• ಪಾದಚಾರಿ ಮಾರ್ಗದ ಮೇಲಿರುವ ಖಾಸಗಿಯವರ ಟೈಲ್ಸ್ ಗಳನ್ನು ತೆರವುಗೊಳಿಸಿ ಹಾಗೂ ಸಮರ್ಪಕ ನಿರ್ವಹಣೆ ಕೈಗೊಳ್ಳಲು ತಿಳಿಸಿದರು.
• ಬಲ್ಕ್ ವೆಸ್ಟ್ ಜನರೇಟರ್ ಗಳು ಪಾದಚಾರಿ ಮಾರ್ಗಗಳಲ್ಲಿ ಕಸ ಸಂಗ್ರಹಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
• ಅನಧಿಕೃತ ಕೇಬಲ್ ಗಳನ್ನು ತೆರವುಗೊಳಿಸಲು ನಿರ್ದೇಶಿಸಿದರು.
• ಬಿ.ಇ.ಎಲ್ ರಸ್ತೆಯನ್ನು ಮಾದರಿ ರಸ್ತೆಯಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಪರಿಶೀಲನೆ ವೇಳೆ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಅಧೀಕ್ಷಕ ಅಭಿಯಂತರರಾದ ಜಯಶಂಕರ್ ಹಾಗೂ ಸಂಬಂಧಪಟ್ಟ ವಿಭಾಗಗಳ ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.
For More Updates Join our WhatsApp Group :




