ಪಿಂಕ್ ಲೈನ್ ಆರಂಭಕ್ಕೆ ಮತ್ತೆ ವಿಳಂಬ ಸಾಧ್ಯತೆ.
ಬೆಂಗಳೂರು : ನಗರದ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ ಘಟಕಕ್ಕೆ ಕೇಂದ್ರ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಭೇಟಿ ನೀಡಿದರು. ಅಲ್ಲಿ ಉತ್ಪಾದನೆಗೊಳ್ಳುತ್ತಿರುವ ಮೆಟ್ರೋ ಬೋಗಿಗಳನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಕಾರ್ಯಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು. ಜೊತೆಗೆ ಬಿಇಎಂಎಲ್ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಬಿಇಎಂಎಲ್ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ಲೈನ್ ಮಾರ್ಗಕ್ಕಾಗಿ ಬಿಇಎಂಎಲ್ ಚಾಲಕ ರಹಿತ ಎಂಜಿನ್ ರೈಲು ಕೋಚ್ಗಳನ್ನು ನಿರ್ಮಿಸುತ್ತಿದೆ. ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ಲೈನ್ ಮಾರ್ಗದ 6 ಮೆಟ್ರೋ ಸ್ಟೇಷನ್ಗಳನ್ನು, ಮೇನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ತಯಾರಿ ನಡೆಸಿದೆ. ಆದರೆ ಟೆಸ್ಟಿಂಗ್ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ, ಓಪನ್ ಆಗುವುದು ಡೌಟ್ ಎನ್ನಲಾಗುತ್ತಿದೆ.
ಜೂನ್ ಅಥವಾ ಜುಲೈನಲ್ಲಿ ಈ ಮಾರ್ಗ ಓಪನ್ ಆಗಲಿದೆ ಎನ್ನಲಾಗುತ್ತಿದೆ. ಪ್ರತಿ ಮಾರ್ಗ ಓಪನ್ ಮಾಡುವ ವೇಳೆ ರೈಲು ಇರುತ್ತಿರಲಿಲ್ಲ, ಆದರೆ ಈ ಬಾರಿ ಪಿಂಕ್ ಲೈನ್ಗಾಗಿ ಈಗಾಗಲೇ ಬಿಇಎಂಎಲ್ನಿಂದ 5 ರೈಲುಗಳು ಬಂದಿದ್ದರು, ಈ ಬಾರಿ ಟೆಸ್ಟಿಂಗ್ ಕೆಲಸ ಮುಗಿಯದ ಹಿನ್ನೆಲೆ, ಮೆಟ್ರೋ ವಿಳಂಬ ಆಗುತ್ತಿದೆ. ಪಿಂಕ್ ಲೈನ್ಗಾಗಿ ಒಟ್ಟು ಬಿಇಎಂಎಲ್ನಲ್ಲಿ 23 ರೈಲುಗಳಿಗೆ ಆರ್ಡರ್ ನೀಡಲಾಗಿದೆ.
ಕಾಳೇನ ಅಗ್ರಹಾರ ಟು ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿರುವ ಪಿಂಕ್ ಲೈನ್ 21.25 ಕಿಮೀ ವಿಸ್ತೀರ್ಣ, 18 ಮೆಟ್ರೋ ಸ್ಟೇಷನ್ಗಳನ್ನು ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳಿವೆ. ಉಳಿದ 13.76. ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್ ಆಗಲಿದೆ ಎನ್ನಲಾಗುತ್ತಿದೆ.
For More Updates Join our WhatsApp Group :




