ಬೆಂಗಳೂರು–ಮುಂಬೈ Vande Bharat ಸ್ಲೀಪರ್ ರೈಲುಗೆ ಮುಹೂರ್ತ ಫಿಕ್ಸ್.!

ಬೆಂಗಳೂರು–ಮುಂಬೈ Vande Bharat ಸ್ಲೀಪರ್ ರೈಲುಗೆ ಮುಹೂರ್ತ ಫಿಕ್ಸ್.!

ಆಗಸ್ಟ್ 1ರಿಂದ ಸಂಚಾರ ಆರಂಭ; ಪ್ರಯಾಣ ಸಮಯದಲ್ಲಿ ಭಾರೀ ಕಡಿತ

ಬೆಂಗಳೂರು: Bengaluru ಮತ್ತು ಮುಂಬೈ ನಡುವಿನ ಬಹು ನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಕ್ಕೆ ಅಧಿಕೃತ ದಿನಾಂಕ ಘೋಷಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಆಗಸ್ಟ್ 1ರಿಂದ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಈ ರೈಲು ಬೆಂಗಳೂರು ಕೆಎಸ್ಆರ್ ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (CSMT)ವರೆಗೆ ಸೊಲ್ಲಾಪುರ ಮತ್ತು ಕಲಬುರಗಿ ಮಾರ್ಗವಾಗಿ ಸಂಚರಿಸಲಿದೆ.

ಪ್ರಸ್ತುತ 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಯಾಣವು ಈ ಹೊಸ ಸೇವೆಯಿಂದ ಸುಮಾರು 15 ಗಂಟೆಗೆ ಇಳಿಯುವ ನಿರೀಕ್ಷೆಯಿದೆ.16 ಬೋಗಿಗಳ ಈ ರೈಲು ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಮಲಗುವ ವ್ಯವಸ್ಥೆ, ಸ್ವಚ್ಛ ಬೋಗಿಗಳು ಹಾಗೂ ಆಧುನಿಕ ಸೌಲಭ್ಯಗಳು ಲಭ್ಯವಾಗಲಿವೆ.ಈ ರೈಲನ್ನು BEML ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ತಂತ್ರಜ್ಞಾನವನ್ನು ಬಳಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *