ಜನಗಣತಿ ಹೊರೆ: ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ.!

ಜನಗಣತಿ ಹೊರೆ: ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ.!

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ; ಸೇವೆ ವ್ಯತ್ಯಯ

ಬೆಂಗಳೂರು: Bengaluru ನಗರದ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುತ್ತಿರುವುದು ಗಮನಸೆಳೆಯುತ್ತಿದೆ. ಆರೋಗ್ಯ ಸಚಿವ Dinesh Gundu Rao ಅವರ ಕ್ಷೇತ್ರದಲ್ಲೇ ಈ ಸಮಸ್ಯೆ ತೀವ್ರವಾಗಿದೆ.

ಆಸ್ಪತ್ರೆಯ ವೈದ್ಯಕೀಯ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಪ್ರಮುಖ ವಿಭಾಗಗಳು ಸ್ಥಗಿತಗೊಂಡಿವೆ. ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಕ್ಕೆ ನಿಯೋಜಿತರಾಗಿದ್ದಾರೆ.

ಪ್ರತಿದಿನ 100–120 ಎಕ್ಸರೆ ನಡೆಯುತ್ತಿದ್ದರೆ, ಇದೀಗ ಕೇವಲ 20 ಮಾತ್ರ ನಡೆಯುತ್ತಿದೆ. ಲ್ಯಾಬ್ ಪರೀಕ್ಷೆಗಳು ವಿಳಂಬವಾಗುತ್ತಿವೆ. ಫಿಸಿಯೋಥೆರಪಿಗೆ ಬಂದವರಲ್ಲಿ ಕೆಲವರಿಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ.ದೂರದ ಊರುಗಳಿಂದ ಬಂದ ರೋಗಿಗಳು ಪರೀಕ್ಷೆ ಮಾಡಿಸಿಕೊಳ್ಳಲಾಗದೆ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.

 “ಆರೋಗ್ಯ ಸೇವೆಯೇ ಮೊದಲ ಆದ್ಯತೆ ಆಗಬೇಕು. ಸಿಬ್ಬಂದಿಯನ್ನು ಬೇರೆ ಕೆಲಸಕ್ಕೆ ಬಳಸಿದರೆ ಬಡ ರೋಗಿಗಳ ಗತಿ ಏನು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *