D.ಸುಧಾಕರ್ ಆರೋಗ್ಯ ಸ್ಥಿರ: ಗೃಹಸಚಿವ ಪರಮೇಶ್ವರ್ ಮಾಹಿತಿ

D.ಸುಧಾಕರ್ ಆರೋಗ್ಯ ಸ್ಥಿರ: ಗೃಹಸಚಿವ ಪರಮೇಶ್ವರ್ ಮಾಹಿತಿ


ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ; ನಾಯಕರು ಭೇಟಿ ನೀಡಿ ವಿಚಾರಣೆ

ಆನೇಕಲ್ : Bengaluru ಸಮೀಪದ ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಚಿವ D Sudhakar ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ವೈದ್ಯರು ಪಾಸಿಟಿವ್ ಸೂಚನೆ ನೀಡಿದ್ದಾರೆ ಎಂದು ಗೃಹಸಚಿವ G Parameshwara ತಿಳಿಸಿದ್ದಾರೆ.

ಶ್ವಾಸಕೋಶದ ಇನ್ಫೆಕ್ಷನ್ ಹಿನ್ನೆಲೆ ವೆಂಟಿಲೇಟರ್ ಹಾಗೂ ಎಕ್ಮೋ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಜ್ಞೆ ಇನ್ನೂ ಬಂದಿಲ್ಲದಿದ್ದರೂ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮುಖ್ಯಮಂತ್ರಿ Siddaramaiah, ಉಪ ಮುಖ್ಯಮಂತ್ರಿ DK Shivakumar ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.“ಎಲ್ಲವೂ ದೇವರ ಇಚ್ಛೆ, ಅವರು ಶೀಘ್ರ ಗುಣಮುಖರಾಗಲಿ” ಎಂದು ಡಾ. ಪರಮೇಶ್ವರ್ ಹಾರೈಸಿದರು.ಸಚಿವರ ಆರೋಗ್ಯ ಮಾಹಿತಿ ಮುಚ್ಚಿಡಲಾಗುತ್ತಿದೆ ಎಂಬ HD Kumaraswamy ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.ರಾಜ್ಯಪಾಲ Thawar Chand Gehlot ಕೂಡ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *