ಕಬ್ಬನ್ ಪಾರ್ಕ್ ಆತ್ಮ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್.!

ಕಬ್ಬನ್ ಪಾರ್ಕ್ ಆತ್ಮ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್.!

ರಾಜಸ್ಥಾನ ಗಲಾಟೆ, ಬೆದರಿಕೆ ಹಿನ್ನೆಲೆ; ಐವರ ವಿರುದ್ಧ FIR

ಬೆಂಗಳೂರು: Cubbon Park ನಲ್ಲಿ 20 ದಿನಗಳ ಹಿಂದೆ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಮೃತನನ್ನು ರಾಜಸ್ಥಾನದ ಸುರೇಶ್ ಕುಮಾರ್ ಪುರೋಹಿತ್ ಎಂದು ಗುರುತಿಸಲಾಗಿದ್ದು, ಆತ್ಮ*ತ್ಯೆಯ ಹಿಂದೆ ಬೆದರಿಕೆ ಮತ್ತು ಹಲ್ಲೆ ಕಾರಣ ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ರಾಜಸ್ಥಾನದಲ್ಲಿ ಜಬರರಾಮ್ ಎಂಬಾತನೊಂದಿಗೆ ನಡೆದ ಜಗಳವು ತೀವ್ರವಾಗಿ, ಪರಸ್ಪರ ಹಲ್ಲೆಗೂ ಕಾರಣವಾಗಿತ್ತು. ಬಳಿಕ ಬೆಂಗಳೂರಿನಲ್ಲಿ ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿತ್ತು.ಮಾರ್ಚ್ ಅಂತ್ಯದ ವೇಳೆ ಸುರೇಶ್ ಬೆಂಗಳೂರಿಗೆ ಬಂದ ಬಳಿಕ, ಆರೋಪಿಗಳು ಹಲ್ಲೆ ನಡೆಸಿದರೆಂಬ ಆರೋಪ ಕೇಳಿಬಂದಿದೆ. ಈ ಕುರಿತು ದೂರು ಕೂಡ ದಾಖಲಾಗಿತ್ತು.

ನಿರಂತರ ಬೆದರಿಕೆ ಮತ್ತು ಹಲ್ಲೆಯಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಸುರೇಶ್, ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಸಹೋದರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿ, ಐವರ ವಿರುದ್ಧ FIR ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *