‘ಯಾವ ರೀತಿಯ ಮನುಷ್ಯರು ನೀವು?’ ಅರ್ಜಿ ವಜಾ; ಆರೋಪಿಗೆ ಕಠಿಣ ಸಂದೇಶ
ಬೆಂಗಳೂರು : Bengaluru ಮೆಟ್ರೋ ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದ ಆರೋಪಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಬೆಂಗಳೂರು ಮೆಟ್ರೋ ಚಿಕ್ಸ್’ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಹೊಂದಿದ್ದ ದಿಗಂತ್ ಬಿ.ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ M Nagaprasanna ಪೀಠ, “ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲ, ಯಾವ ರೀತಿಯ ಮನುಷ್ಯರು ನೀವು?” ಎಂದು ಕಠಿಣವಾಗಿ ಪ್ರಶ್ನಿಸಿದೆ.
ಆರೋಪಿ ಮೆಟ್ರೋದಲ್ಲಿ ಮಹಿಳೆಯರ ಅನುಮತಿಯಿಲ್ಲದೆ ವಿಡಿಯೋ ಚಿತ್ರೀಕರಿಸಿ ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಂನಲ್ಲಿ ಹಂಚಿದ್ದನು. ಈ ಕುರಿತು ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿದ್ದರು. “ಇಂತಹ ಗಂಭೀರ ಪ್ರಕರಣಗಳಲ್ಲಿ ತಾಂತ್ರಿಕ ಅಂಶಗಳನ್ನು ನೆಪವಿಟ್ಟು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೈತಿಕತೆ ಮತ್ತು ಸುರಕ್ಷತೆ ಮುಖ್ಯ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆರೋಪಿಯ ವಿರುದ್ಧ BNS ಸೆಕ್ಷನ್ಗಳು ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಬಂಧನವಾಗಿತ್ತು.
For More Updates Join our WhatsApp Group :




