ದಾವಣಗೆರೆ ಹರಿಹರದಲ್ಲಿ ಭಕ್ತರು–ಟ್ರಸ್ಟ್ ಬೆಂಬಲಿಗರ ನಡುವೆ ಜಟಾಪಟಿ
ದಾವಣಗೆರೆ: Davanagere ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್ ಆಡಳಿತದ ಲೆಕ್ಕಪತ್ರ ಮಂಡನೆ ವೇಳೆ ಭಾರೀ ಗಲಾಟೆ ನಡೆದ ಘಟನೆ ವರದಿಯಾಗಿದೆ. ಲೆಕ್ಕಪತ್ರ ಮಂಡನೆ ಸಂದರ್ಭದಲ್ಲಿ ಸ್ವಾಮೀಜಿ ಬೆಂಬಲಿಗರು ಮತ್ತು ಟ್ರಸ್ಟ್ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ಉಂಟಾಗಿದೆ.
ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕ ಮಂಡನೆ ಮಾಡುವ ವೇಳೆ ನಿಂದನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಎರಡೂ ಗುಂಪುಗಳ ನಡುವೆ ವಾಗ್ವಾದ ತೀವ್ರಗೊಂಡಿದೆ. “ಲೆಕ್ಕ ಕೇಳೋರು ಇಷ್ಟು ದಿನ ಎಲ್ಲಿ ಹೋಗಿದ್ರಿ” ಎಂಬ ಮಾತುಗಳಿಂದ ಪರಿಸ್ಥಿತಿ ಉದ್ವಿಗ್ನಗೊಂಡು ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ.ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಗಲಾಟೆಯನ್ನು ಶಮನಗೊಳಿಸಿದ್ದಾರೆ. ಹೆಚ್ಚಿನ ಅಹಿತಕರ ಘಟನೆಗಳನ್ನು ತಪ್ಪಿಸಲಾಗಿದೆ.
For More Updates Join our WhatsApp Group :




