ರಾಜ್ಯದಲ್ಲಿನ ಸರ್ಕಾರಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮುಖ್ಯಮಂತ್ರಿಗಳಿಗೆ ಆಮ್ ಆದ್ಮಿ ಪಕ್ಷದಿಂದ ಬಹಿರಂಗ ಪತ್ರ
ಬೆಂಗಳೂರು: ಆಮ್ ಆದ್ಮಿ ಪಕ್ಷವು ಸಾಂಪ್ರದಾಯಿಕ ರಾಜಕಾರಣ ಹಿಮ್ಮೆಟ್ಟಿ ಭಾರತದಲ್ಲಿ ರಾಜಕೀಯ ಕ್ರಾಂತಿ ತರಲು ಜನಸಿದ ಪಕ್ಷ. ಇಂದು ಅನೇಕ ಪಕ್ಷಗಳು , ವಿವಿಧ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳೂ ಸೇರಿದಂತೆ — ಆಮ್ ಆದ್ಮಿ ಪಕ್ಷದ ಆಡಳಿತ ಮಾದರಿಯನ್ನು ಅನುಸರಿಸುತ್ತಿರುವುದು ಪ್ರೋತ್ಸಾಹಕರ ಸಂಗತಿ. ತೆರಿಗೆದಾರರಿಗೆ ಉಚಿತ ವಿದ್ಯುತ್, ಉಚಿತ ನೀರು ನೀಡುವುದು ಸಾಮಾನ್ಯವಾಗಿದೆ. ಉತ್ತಮ ಶಿಕ್ಷಣ ಮತ್ತು ಉತ್ತಮ ಆರೋಗ್ಯ ಸೇವೆಗಳು ಈಗ ರಾಜಕೀಯ ಚರ್ಚೆಗಳ ಪ್ರಮುಖ ಅಂಶಗಳಾಗಿವೆ. ಆಪ್ ಈ ವಿಷಯಗಳನ್ನು ಪ್ರಸ್ತಾಪಿಸುವ ಮೊದಲು, ಇವು ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿರಲಿಲ್ಲ.
ಕೆಲವು ಅಂಶಗಳ ಬಗ್ಗೆ ತಕ್ಷಣ ಗಮನ ಹರಿಸಬೇಕಿದೆ:
1) *ಸಮರ್ಪಕ ಹಣಕಾಸು*: ದೆಹಲಿಯ ಶಿಕ್ಷಣ ಸಾಧನೆಗೆ ಪ್ರಮುಖ ಕಾರಣ ರಾಜ್ಯದ ಬಜೆಟ್‌ನ ಸುಮಾರು 25% ಶಿಕ್ಷಣಕ್ಕೆ ಮೀಸಲಿಟ್ಟಿದ್ದು. ಕರ್ನಾಟಕವೂ ಸಹ ಸಮರ್ಪಕ ಹಣಕಾಸು ಹಂಚಿಕೆ ಮಾಡಬೇಕು; ಇಲ್ಲದಿದ್ದರೆ ಭರವಸೆಗಳು ಮಾತಿಗೆ ಮಾತ್ರ ಸೀಮಿತವಗುತ್ತದೆ. ಆದ್ದರಿಂದ, ಸಿದ್ದರಾಮಯ್ಯ ಸರ್ಕಾರ ತಕ್ಷಣವೇ ಅಗತ್ಯವಿರುವಷ್ಟು ಅನುದಾನವನ್ನು ಮೀಸಲಿಡಬೇಕು ಎಂದು ನಾವು ವಿನಂತಿಸುತ್ತೇವೆ.
2) *ಶಿಕ್ಷಕರ ಸಾಮರ್ಥ್ಯ ವೃದ್ಧಿ*: ಶಿಕ್ಷಕರು ಯಾವುದೇ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು. ಕ್ರಮಬದ್ಧ ತರಬೇತಿ, ನಾಯಕತ್ವ ಅಭಿವೃದ್ಧಿ ಹಾಗೂ ಬೆಂಬಲ ಇಲ್ಲದೆ ಸುಧಾರಣೆ ಸಾಧ್ಯವಿಲ್ಲ. ಆದ್ದರಿಂದ, ಈ ಭರವಸೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಶಿಕ್ಷಕರ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬೇಕು.
ಸಿದ್ದರಾಮಯ್ಯ ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಭರವಸೆಗಳು ನಿಜವಾಗಲು ಅನುಷ್ಠಾನಕ್ಕೆ ಬಂದಾಗಲೇ ಆ ಭರವಸೆಗೆ ಒಂದು ಅರ್ಥ ಇದೆ. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನಕ್ಕೆ AAP ತನ್ನ ಸಂಪೂರ್ಣ ಬೆಂಬಲ ನೀಡಲು ಬದ್ಧವಾಗಿದೆ. . ಕರ್ನಾಟಕದ ಜನತೆಗೆ ಕೇವಲ ಭರವಸೆಗಳಷ್ಟೇ ಅಲ್ಲ, ಫಲಿತಾಂಶಗಳೂ ಬೇಕು.ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿತಿಳಿಸಿದ್ದಾರೆ.
For More Updates Join our WhatsApp Group :




