ಬೆಂಗಳೂರಿಗರೇ ಎಚ್ಚರ: ಇಂದು ಮತ್ತೆ ರಣಮಳೆ ಸಾಧ್ಯತೆ!

ಬೆಂಗಳೂರಿಗರೇ ಎಚ್ಚರ: ಇಂದು ಮತ್ತೆ ರಣಮಳೆ ಸಾಧ್ಯತೆ!

ಬೆಂಗಳೂರಿಗರೇ ಎಚ್ಚರ: ಯಾವೆಲ್ಲ ಭಾಗಗಳಲ್ಲಿ ಮಳೆಯಾಗಲಿದೆ?

ಬೆಂಗಳೂರು: ಬುಧವಾರದ ಭೀಕರ ಮಳೆಯ ನಂತರ ಇಂದು ಕೂಡ ನಗರದಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

ದಕ್ಷಿಣ ಬೆಂಗಳೂರು:ಜೆ.ಪಿ. ನಗರ, ಜಯನಗರ, ಬನ್ನೇರುಘಟ್ಟ ರಸ್ತೆ, ಬಿಟಿಎಂ ಲೇಔಟ್

ಪೂರ್ವ ಬೆಂಗಳೂರು: ವೈಟ್ಫೀಲ್ಡ್, ಮಾರತಹಳ್ಳಿ, ಎಚ್ಎಸ್ಆರ್ ಲೇಔಟ್, ಬೆಳ್ಳಂದೂರು

ಕೇಂದ್ರ ಭಾಗ:ಶಿವಾಜಿನಗರ, ಮೆಜೆಸ್ಟಿಕ್, ಎಂ.ಜಿ. ರಸ್ತೆ, ಶಾಂತಿನಗರ

ಉತ್ತರ ಭಾಗ:ಯಲಹಂಕ, ಹೆಬ್ಬಾಳ, ಆರ್.ಟಿ. ನಗರ (ಸಾಧಾರಣ ಮಳೆ)

ಭಾರೀ ಮಳೆಯಿಂದ ಈಗಾಗಲೇ 9 ಮಂದಿ ಸಾವನ್ನಪ್ಪಿದ್ದಾರೆ.Bowring and Lady Curzon Hospital ಬಳಿ ಕಾಂಪೌಂಡ್ ಗೋಡೆ ಕುಸಿದು ಮಗು ಸೇರಿ ಹಲವರು ಮೃತಪಟ್ಟಿದ್ದಾರೆ. ಮಲ್ಲೇಶ್ವರಂ, ಶಾಂತಿನಗರ, ಶೇಷಾದ್ರಿಪುರಂ ಸೇರಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಬಿದ್ದಿವೆ.ವಿಧಾನಸೌಧ ಕಾರಿಡಾರ್‌ಗಳಿಗೂ ನೀರು ನುಗ್ಗಿದೆ.ರಿಚ್ಮಂಡ್ ಟೌನ್, ಶಾಂತಿನಗರ ಭಾಗಗಳಲ್ಲಿ ರಸ್ತೆ ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ. ಮೆಟ್ರೋ ಸೇವೆಯಲ್ಲೂ ವ್ಯತ್ಯಯ ಕಂಡುಬಂದಿದ್ದು, ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ.37°C ವರೆಗೆ ಏರಿದ್ದ ತಾಪಮಾನ ಮಳೆಯಿಂದ ಇಳಿದರೂ, ನಗರದ ಮೂಲಸೌಕರ್ಯದ ದುಸ್ಥಿತಿ ಬಯಲಾಗಿದೆ.

For More Updates Join our WhatsApp Group : 

 https://chat.whatsapp.com/JVoHqE476Wn3pVh1gWNAcH

      

Leave a Reply

Your email address will not be published. Required fields are marked *