ಮಳೆ–ಗಾಳಿ ಪರಿಣಾಮದಿಂದ ಉಂಟಾದ ಸಮಸ್ಯೆಗಳ ಶೀಘ್ರ ಪರಿಹಾರ.!

ಮಳೆ–ಗಾಳಿ ಪರಿಣಾಮದಿಂದ ಉಂಟಾದ ಸಮಸ್ಯೆಗಳ ಶೀಘ್ರ ಪರಿಹಾರ.!

ಎಲ್ಲಾ ದೂರುಗಳ ಸಂಪೂರ್ಣ ನಿವಾರಣೆ – ನೀರು ನಿಲುವು ಕೂಡ ಪೂರ್ಣ ತೆರವು.!

ಬೆಂಗಳೂರು: ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ಉಂಟಾದ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯು ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ  ತುರ್ತು ಕ್ರಮ ಕೈಗೊಳ್ಳಲಾಯಿತು.

26 ಮರಗಳು ಹಾಗೂ 82 ರೆಂಬೆಕೊಂಬೆಗಳ ತೆರವು ಕಾರ್ಯಾಚರಣೆ ಪೂರ್ಣ ಈ ಅವಧಿಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳು ಮತ್ತು ಕೊಂಬೆಗಳು ಬೀಳುವ ಘಟನೆಗಳ ಕುರಿತು ಒಟ್ಟು 111 ದೂರುಗಳು (29 ಮರಗಳು ಹಾಗೂ 82 ಕೊಂಬೆಗಳು) ದಾಖಲಾಗಿದ್ದವು.

ಪ್ರದೇಶವಾರು ಪರಿಶೀಲನೆಯಂತೆ, ಬ್ಯಾಟರಾಯನಪುರದಲ್ಲಿ 2 ಮರಗಳು ಮತ್ತು 14 ಕೊಂಬೆಗಳು, ಸರ್ವಜ್ಞನಗರದಲ್ಲಿ 6 ಮರಗಳು ಮತ್ತು 16 ಕೊಂಬೆಗಳು, ಪುಲಿಕೇಶಿನಗರದಲ್ಲಿ 7 ಮರಗಳು ಮತ್ತು 16 ಕೊಂಬೆಗಳು, ಹೆಬ್ಬಾಳದಲ್ಲಿ 2 ಮರಗಳು ಮತ್ತು 17 ಕೊಂಬೆಗಳು, ದಾಸರಹಳ್ಳಿ/ಆರ್.ಆರ್ ನಗರದಲ್ಲಿ 8 ಮರಗಳು ಮತ್ತು 12 ಕೊಂಬೆಗಳು ಹಾಗೂ ಯಲಹಂಕದಲ್ಲಿ 4 ಮರಗಳು ಮತ್ತು 7 ಕೊಂಬೆಗಳು ಬೀಳುವ ಘಟನೆಗಳು ವರದಿಯಾಗಿದ್ದವು.

9 ಸ್ಥಳಗಳ ನೀರುನಿಲುವು  ಸಮಸ್ಯೆ ಸಂಪೂರ್ಣ ತೆರವು.ಇದೇ ವೇಳೆ, ಮಳೆಯ ಪರಿಣಾಮವಾಗಿ ಪಾಲಿಕೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಜಲಾವೃತವಾದ 9 ಸ್ಥಳಗಳ ಸಮಸ್ಯೆಗಳನ್ನು ಕೂಡ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ, ಇದರಿಂದ ಎಲ್ಲಾ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ಮರಳಿದೆ.

ಇಡೀ ದಿನ ನಡೆದ ತುರ್ತು ಕಾರ್ಯಾಚರಣೆಯ ಮೂಲಕ ಬಹುತೇಕ ಎಲ್ಲಾ ಮರಗಳು ಮತ್ತು ಕೊಂಬೆಗಳ ತೆರವು ಕಾರ್ಯ ಪೂರ್ಣಗೊಂಡಿದ್ದು, ಇನ್ನೂ 3 ಮರಗಳ ತೆರವು ಕಾರ್ಯ ಪ್ರಗತಿಯಲ್ಲಿದೆ. ದಾಖಲಾಗಿದ್ದ ಎಲ್ಲಾ ದೂರುಗಳಿಗೆ ಶೇಕಡಾ 100ರಷ್ಟು ಪರಿಹಾರ ನೀಡಲು ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.ಮಳೆ–ಗಾಳಿ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ತ್ವರಿತ ಕ್ರಮ ಕೈಗೊಳ್ಳಲಾಗಿದ್ದು, ನಗರದ ಎಲ್ಲಾ ಭಾಗಗಳಲ್ಲಿ ಸಾಮಾನ್ಯ ಸ್ಥಿತಿ ಮರುಸ್ಥಾಪಿಸಲಾಗಿದೆ.

ನಗರದ ಮೂಲಸೌಕರ್ಯ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ನಿರಂತರವಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *