ಬೆಂಗಳೂರು–ನೆಲಮಂಗಲ ಹೈವೇಯಲ್ಲಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು : ಸತತ ಮೂರು ದಿನಗಳ ಲಾಂಗ್ ವೀಕೆಂಡ್ ಹಿನ್ನೆಲೆಯಲ್ಲಿ ಬೆಂಗಳೂರು ನಿವಾಸಿಗಳು ಊರು ಹಾಗೂ ಪ್ರವಾಸಿ ತಾಣಗಳತ್ತ ತೆರಳುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ.ಬೆಂಗಳೂರು–ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿದ್ದು, ಸಂಚಾರ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.
ನೆಲಮಂಗಲ ಟೋಲ್ ಗೇಟ್ ಬಳಿ ವಾಹನಗಳ ದಟ್ಟಣೆ ಹೆಚ್ಚಾಗಿ, ಸಾಲುಗಳು ದೂರದವರೆಗೆ ವಿಸ್ತರಿಸಿರುವ ದೃಶ್ಯ ಕಂಡುಬಂದಿದೆ.ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಸ್ಥಳದಲ್ಲಿ ನಿಯೋಜನೆಗೊಂಡು ವಾಹನ ಹರಿವು ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ.ಪ್ರವಾಸಿ ತಾಣಗಳತ್ತ ಹೆಚ್ಚುತ್ತಿರುವ ವಾಹನ ಸಂಚಾರವೇ ಈ ಭಾರಿ ಟ್ರಾಫಿಕ್ ಜಾಮ್ಗೆ ಪ್ರಮುಖ ಕಾರಣವಾಗಿದೆ.
For More Updates Join our WhatsApp Group :




