ಉತ್ತರ–ಕಲ್ಯಾಣ ಕರ್ನಾಟಕಕ್ಕೆ 4 ವಿಶೇಷ ರೈಲುಗಳು ಖಾಯಂ: ದರದಲ್ಲೂ ಇಳಿಕೆ
ಬೆಂಗಳೂರು: ಭಾರತೀಯ ರೈಲ್ವೆ ಮಂಡಳಿಯು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಭರ್ಜರಿ ಸೌಗಾತ್ ನೀಡಿದೆ. ತಾತ್ಕಾಲಿಕ ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದ 4 ರೈಲುಗಳನ್ನು ಈಗ ಶಾಶ್ವತವಾಗಿ ಖಾಯಂಗೊಳಿಸಲಾಗಿದೆ.
ಖಾಯಂಗೊಂಡ ಪ್ರಮುಖ ರೈಲುಗಳು
- ಸೊಲ್ಲಾಪುರ–ಕಲಬುರಗಿ ಡೆಮು (71435/71436)
ದೈನಂದಿನ ಸಂಚಾರಕ್ಕೆ ಉಪಯುಕ್ತ, ದತ್ತಾತ್ರೇಯ ಭಕ್ತರಿಗೆ ವರದಾನ - ದೌಂಡ್–ಕಲಬುರಗಿ ಪ್ಯಾಸೆಂಜರ್ (51301/51302, 51303/51304)
ವಾರದ 5 ದಿನ ಹಾಗೂ 2 ದಿನ ಸಂಚರಿಸುವ ವ್ಯವಸ್ಥೆ - ಸೊಲ್ಲಾಪುರ–ಮುಂಬೈ ಎಕ್ಸ್ಪ್ರೆಸ್ (11303/11304)
ಬೀದರ್, ಭಾಲ್ಕಿ, ಹುಮ್ನಾಬಾದ್ ಮೂಲಕ ಮುಂಬೈಗೆ ನೇರ ಸಂಪರ್ಕ - ಸೊಲ್ಲಾಪುರ–ಅನಕಾಪಲ್ಲಿ ಎಕ್ಸ್ಪ್ರೆಸ್ (11313/11314)
ಯಾದಗಿರಿ, ವಾಡಿ, ರಾಯಚೂರು ಮೂಲಕ ಆಂಧ್ರ ಪ್ರದೇಶ ಸಂಪರ್ಕ
ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಉದ್ಯೋಗಿಗಳಿಗೆ ಇದು ದೊಡ್ಡ ಅನುಕೂಲವಾಗಿದೆ.
For More Updates Join our WhatsApp Group :




