ಜಾತ್ರೆ ಹಣ ಕೊಡದಿದ್ದಕ್ಕೆ 7 ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ.
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ 7 ಕುಟುಂಬಗಳಿಗೆ ಊರಿನಿಂದಲೇ ಬಹಿಷ್ಕಾರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.ಹನುಮಂತ ದೇವರ ಓಕುಳಿ ಜಾತ್ರೆಗೆ ₹600 ಹಣ ನೀಡದ ಕಾರಣಕ್ಕೆ ಈ ಕುಟುಂಬಗಳನ್ನು ಸಮಾಜದಿಂದ ದೂರ ಇಡಲಾಗಿದೆ.
ಯಲಪ್ಪ ಛಗಣ್ಣವರ ಸೇರಿದಂತೆ 7 ಕುಟುಂಬಗಳು ಈ ಬಹಿಷ್ಕಾರದಿಂದ ಸಂಕಷ್ಟಕ್ಕೆ ಸಿಲುಕಿವೆ.ರೈಲ್ವೆ ನೌಕರ ಯಲ್ಲಪ್ಪ ಛಗಣ್ಣವರ ಈ ಕ್ರಮವನ್ನು ಪ್ರಶ್ನಿಸಿ, ಅಧಿಕಾರಿಗಳಿಗೆ ದೂರು ನೀಡಿದ್ದಾರೆ.ಜಮಖಂಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ ಸಮಾಧಾನಪಡಿಸಿದ್ದಾರೆ.ಬಹಿಷ್ಕಾರದಿಂದ ಅಪಮಾನವಾಗಿದೆ ಎಂದು ಕುಟುಂಬಗಳು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




