ಜೂನ್‌ನಿಂದ ‘ಒನ್ ನೇಷನ್ ಒನ್ ಕಾರ್ಡ್’ ಬೆಂಗಳೂರಿನಲ್ಲಿ ಆರಂಭ.!

ಜೂನ್‌ನಿಂದ ‘ಒನ್ ನೇಷನ್ ಒನ್ ಕಾರ್ಡ್’ ಬೆಂಗಳೂರಿನಲ್ಲಿ ಆರಂಭ.!

ಮೆಟ್ರೋ–ಬಸ್ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಸೌಲಭ್ಯ.

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಯಾಣಿಕರಿಗೆ ಇನ್ಮುಂದೆ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ. ಜೂನ್ ತಿಂಗಳಿನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಎಲ್ಲ ಬಸ್‌ಗಳಲ್ಲಿ ‘ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್’ (ಎನ್‌ಸಿಎಂಸಿ) ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಇದರಿಂದ ಪ್ರಯಾಣಿಕರು ನಮ್ಮ ಮೆಟ್ರೋ ಕಾರ್ಡ್ ಬಳಸಿ ಬಿಎಂಟಿಸಿ ಬಸ್‌ಗಳಲ್ಲೂ ಪ್ರಯಾಣಿಸಬಹುದಾಗಿದೆ.

ಇವುಗಳು ಎನ್‌ಸಿಎಂಸಿ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡುವ ಸಾಮರ್ಥ್ಯ ಹೊಂದಿವೆ. ನಮ್ಮ ಮೆಟ್ರೋ ಈಗಾಗಲೇ ಆರ್‌ಬಿಎಲ್ ಬ್ಯಾಂಕ್ ಸಹಭಾಗಿತ್ವದಲ್ಲಿ ವಿತರಿಸುತ್ತಿರುವ ಸ್ಮಾರ್ಟ್ ಕಾರ್ಡ್‌ಗಳು ಸೇರಿದಂತೆ, ಯಾವುದೇ ಬ್ಯಾಂಕ್ ನೀಡಿರುವ ಎನ್‌ಸಿಎಂಸಿ ಕಾರ್ಡ್‌ಗಳನ್ನು ಈ ಯಂತ್ರಗಳು ಸ್ವೀಕರಿಸಲಿವೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಮುಂದಿನ ನಾಲ್ಕು ವರ್ಷಗಳ ಕಾಲ ನಿರ್ವಹಣಾ ಒಪ್ಪಂದವನ್ನು ಒಳಗೊಂಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜಾರಿಗೆ ತರುತ್ತಿರುವ ಹೊಸ ಸ್ಮಾರ್ಟ್ ಟಿಕೆಟಿಂಗ್ ವ್ಯವಸ್ಥೆಯು ಕೇವಲ ಪ್ರಯಾಣದ ಸುಗಮತೆಗಾಗಿ ಮಾತ್ರವಲ್ಲದೆ, ಇತ್ತೀಚೆಗೆ ಹೆಚ್ಚುತ್ತಿರುವ ಟಿಕೆಟ್ ದಂಧೆ ಮತ್ತು ವಂಚನೆಗಳಿಗೆ ಬ್ರೇಕ್ ಹಾಕುವ ಉದ್ದೇಶವನ್ನೂ ಹೊಂದಿದೆ. ಈಗಾಗಲೇ ಯಶವಂತಪುರ ಮತ್ತು ಮೆಜೆಸ್ಟಿಕ್ ಸೇರಿದಂತೆ ಎರಡು ಡಿಪೋಗಳಲ್ಲಿ ಸುಮಾರು 400 ಇಟಿಎಂ ಯಂತ್ರಗಳ ಮೂಲಕ ಈ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಬನಶಂಕರಿ, ಕೆಂಗೇರಿ, ಚಿಕ್ಕನಾಗಮಂಗಲ, ಕೋರಮಂಗಲ ಡಿಪೋಗಳಿಗೆ ಹೆಚ್ಚುವರಿಯಾಗಿ 1,400 ಯಂತ್ರಗಳನ್ನು ಒದಗಿಸಲಾಗುತ್ತಿದೆ. ಏಪ್ರಿಲ್ ಅಂತ್ಯದ ವೇಳೆಗೆ ಬಿಎಂಟಿಸಿಯ ಎಲ್ಲಾ ಡಿಪೋಗಳಿಗೂ ಈ ನೂತನ ಯಂತ್ರಗಳನ್ನು ಪೂರೈಸಲಾಗುವುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *