ಆಟೋ ಚಾಲಕರಿಗೆ ಬಿಗ್ ಶಾಕ್: ಗ್ಯಾಸ್ ದರ ₹5.73 ಏರಿಕೆ

ಆಟೋ ಚಾಲಕರಿಗೆ ಬಿಗ್ ಶಾಕ್: ಗ್ಯಾಸ್ ದರ ₹5.73 ಏರಿಕೆ

ಬೆಂಗಳೂರುದಲ್ಲಿ ಇಂಧನ ಬೆಲೆ ಹೆಚ್ಚಳದಿಂದ ಆಟೋ ಸಂಚಾರ ದುಬಾರಿ ಸಾಧ್ಯತೆ

ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಹಾಗೂ ಆಟೋ ಚಾಲಕರಿಗೆ ಈಗ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಹಿನ್ನೆಲೆಯಲ್ಲಿ ಆಟೋ  ದರದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಇಂದಿನ ದರ ಎಷ್ಟು?

ಇಂದಿನಿಂದ ಜಾರಿಗೆ ಬರುವಂತೆ ಆಟೋ ಗ್ಯಾಸ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 5.73 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 89 ರೂಪಾಯಿ ಇದ್ದ ದರವು, ಈ ಏರಿಕೆಯ ನಂತರ 95.08 ರೂಪಾಯಿಗೆ ತಲುಪಿದೆ.

ಚಾಲಕರ ಆತಂಕ

ದಿಢೀರ್ ಎಂದು ಲೀಟರ್‌ಗೆ ಸುಮಾರು 6 ರೂಪಾಯಿಯಷ್ಟು ಏರಿಕೆಯಾಗಿರುವುದು ಆಟೋ ಚಾಲಕರ ನಿದ್ದೆಗೆಡಿಸಿದೆ. ಇಂಧನ ದರ ಏರಿಕೆಯಾದಷ್ಟೂ ಚಾಲಕರ ನಿವ್ವಳ ಲಾಭ ಕಡಿಮೆಯಾಗಲಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಗ್ಯಾಸ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಆಟೋ ಪ್ರಯಾಣದ ದರವನ್ನು  ಹೆಚ್ಚಿಸುವಂತೆ ಚಾಲಕರು ಮತ್ತು ಸಂಘಟನೆಗಳು ಒತ್ತಾಯಿಸುವ ಸಾಧ್ಯತೆಯಿದೆ. ಇದು ನೇರವಾಗಿ ಸಾಮಾನ್ಯ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *