ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ಶಾಕ್.!

ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ಶಾಕ್.!

ಪ್ರತಿ ವರ್ಷ ಶೇ.3 ಹೆಚ್ಚಳ – ಜಲಮಂಡಳಿ ಹೊಸ ತೀರ್ಮಾನ.

ಬೆಂಗಳೂರು : ನಗರದಲ್ಲಿ ಕಾವೇರಿ ನೀರಿನ ದರ ಏರಿಕೆಯು ನಾಗರಿಕರಿಗೆ ಮತ್ತೊಂದು ಆರ್ಥಿಕ ಶಾಕ್ ನೀಡಿದ್ದು, ಇಂದಿನಿಂದಲೇ ಜೀವನ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆ ಕಾಣುತ್ತಿದೆ. ಬೆಂಗಳೂರು ಜಲಮಂಡಳಿ ಈಗಾಗಲೇ ಏಪ್ರಿಲ್ 1ರಿಂದ ನೀರಿನ ದರದಲ್ಲಿ ಶೇ 3 ರಷ್ಟು ಹೆಚ್ಚಳ ಜಾರಿಗೆ ತಂದಿದೆ.

ಜಲಮಂಡಳಿಯ ಪ್ರಕಾರ, ಆರ್ಥಿಕ ನಷ್ಟ, ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ, ವಿದ್ಯುತ್‌ ಖರ್ಚು ಹಾಗೂ ಮೂಲಸೌಕರ್ಯ ಅಭಿವೃದ್ಧಿ ವೆಚ್ಚಗಳ ಹೆಚ್ಚಳದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಹೆಚ್ಚುವರಿ ಹಣಕಾಸು ಅಗತ್ಯವಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರತಿ ವರ್ಷವೂ ಶೇ 3 ರಷ್ಟು ನೀರಿನ ದರವನ್ನು ಹೆಚ್ಚಿಸಲು ನಿರ್ಧಾರ

ಇನ್ನೊಂದು ಮಹತ್ವದ ಅಂಶವೆಂದರೆ, ಇನ್ನು ಮುಂದೆ ಪ್ರತಿ ವರ್ಷವೂ ಶೇ 3 ರಷ್ಟು ನೀರಿನ ದರವನ್ನು ಹೆಚ್ಚಿಸಲು ಜಲಮಂಡಳಿ ತೀರ್ಮಾನಿಸಿರುವುದು. ಇದರಂತೆ, ಈ ವರ್ಷದ ಪರಿಷ್ಕೃತ ದರಗಳು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದ್ದು, ಅದರ ಪರಿಣಾಮ ಗ್ರಾಹಕರಿಗೆ ಮೇ ತಿಂಗಳ ನೀರಿನ ಬಿಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಪರಿಷ್ಕೃತ ದರಗಳ ಪ್ರಕಾರ, ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ ಗರಿಷ್ಠ 1 ಪೈಸೆಯವರೆಗೆ ಹೆಚ್ಚಳವಾಗಲಿದೆ. ಇದರ ಪರಿಣಾಮವಾಗಿ ಮನೆಮಠಗಳಲ್ಲಿ ಮಾಸಿಕ ನೀರಿನ ಶುಲ್ಕವು ಸರಾಸರಿ 20ರಿಂದ 30 ರೂಪಾಯಿ ಹೆಚ್ಚುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ, ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರಿಗೆ ಪ್ರತಿ ಲೀಟರ್‌ಗೆ ಗರಿಷ್ಠ 1.90 ಪೈಸೆ ಹೆಚ್ಚಳವಾಗಲಿದ್ದು, ಅವರ ಮಾಸಿಕ ಬಿಲ್‌ಗಳಲ್ಲಿ 50ರಿಂದ 60 ರೂಪಾಯಿ ಹೆಚ್ಚುವರಿ ಭಾರ ಬೀಳುವ ಸಾಧ್ಯತೆ ಇದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *