ಮೆಜೆಸ್ಟಿಕ್‌ನಲ್ಲಿ 2 ವರ್ಷದ ಮಗುವಿನ ಮಾರಾಟ ಆರೋಪ – ತಾಯಿಯ ವಿರುದ್ಧ ಗಂಭೀರ ಪ್ರಕರಣ.

ಮೆಜೆಸ್ಟಿಕ್‌ನಲ್ಲಿ 2 ವರ್ಷದ ಮಗುವಿನ ಮಾರಾಟ ಆರೋಪ – ತಾಯಿಯ ವಿರುದ್ಧ ಗಂಭೀರ ಪ್ರಕರಣ.

ಬೆಂಗಳೂರಿನಲ್ಲಿ ಆಘಾತಕಾರಿ ಆರೋಪ.!

ಬೆಂಗಳೂರು : ಮೆಜೆಸ್ಟಿಕ್ ಪ್ರದೇಶದಲ್ಲಿ 2 ವರ್ಷದ ಗಂಡು ಮಗುವನ್ನು ತಾಯಿಯೇ ₹5 ಲಕ್ಷಕ್ಕೆ ಮಾರಾಟ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ಪತಿ ರವಿ ಬಾಬು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ರವಿ ಬಾಬು ದಂಪತಿ ನಡುವೆ ನಡೆದ ನಿರಂತರ ಜಗಳದ ಬಳಿಕ ಪತ್ನಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ.ಮನೆ ಬಿಟ್ಟಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳನ್ನು ಮೆಜೆಸ್ಟಿಕ್‌ನಲ್ಲಿ ಬಿಟ್ಟು ಹೋಗಲಾಗಿತ್ತು. ಅವರು ನಂತರ ಸ್ವತಃ ಮನೆ ಹುಡುಕಿಕೊಂಡು ತಂದೆ ಬಳಿಗೆ ಮರಳಿದ್ದಾರೆ ಎಂದು ವರದಿ.

ತಾಯಿ ಕರೆದೊಯ್ದಿದ್ದ ಎರಡೂವರೆ ವರ್ಷದ ಮಗುವನ್ನು ₹5 ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ ಎಂದು ಪತಿ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಗೆ ಪತ್ನಿಯ ಕುಟುಂಬದವರ ಸಹಾಯವೂ ಇದ್ದುಬಂದಿದೆ ಎಂದು ಆರೋಪಿಸಲಾಗಿದೆ.ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದರೂ, ಪೊಲೀಸರು ಗಂಭೀರವಾಗಿ ಸ್ಪಂದಿಸಿಲ್ಲ ಎಂದು ರವಿ ಬಾಬು ಆರೋಪಿಸಿದ್ದಾರೆ. ಪ್ರಕರಣ ಈಗ ತನಿಖೆಯ ಹಂತದಲ್ಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *