ಬಾಗಲಕೋಟೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ಗೆ ಕ್ಷೇತ್ರ ಮರಳಿ.!
ಬಾಗಲಕೋಟೆ : ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. ಹೆಚ್.ವೈ. ಮೇಟಿ ನಿಧನದಿಂದ ತೆರವಾಗಿದ್ದ ಕ್ಷೇತ್ರವನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ಪಡೆದಿದೆ.ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ತೀವ್ರ ಪೈಪೋಟಿ ನೀಡಿದರೂ ಅಂತಿಮವಾಗಿ ಸೋಲು ಕಂಡಿದ್ದಾರೆ. ಉಮೇಶ್ ಮೇಟಿ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ – 97,941 ಮತಗಳು
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ – 76,075 ಮತಗಳು
ಒಟ್ಟು 21,866 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಾಗಿದೆ.
ಈ ಗೆಲುವಿನ ಮೂಲಕ ಉಮೇಶ್ ಮೇಟಿ ಕ್ಷೇತ್ರದ ಹಿಂದಿನ ಅತಿದೊಡ್ಡ ಗೆಲುವಿನ ಅಂತರದ ದಾಖಲೆಯನ್ನು ಮುರಿದಿದ್ದಾರೆ. ಸಹೋದರ ಮಲ್ಲಿಕಾರ್ಜುನ ಮೇಟಿ ಈ ಜಯವನ್ನು ಭಾವನಾತ್ಮಕವಾಗಿ ಸ್ವಾಗತಿಸಿದ್ದು, “ತಂದೆಯ ಆತ್ಮಕ್ಕೆ ಶಾಂತಿ ಸಿಕ್ಕಿದೆ” ಎಂದು ಹೇಳಿದ್ದಾರೆ. ಮತದಾರರು ಮತ್ತು ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
For More Updates Join our WhatsApp Group :




