ಮೋದಿ ಎಂದರೆ ಸ್ಪೂರ್ತಿ, ಮೋದಿ ಎಂದರೆ ಪ್ರೇರಣೆ, ಮೋದಿ ಎಂದರೆ ಜಯದ ಸಂಕೇತ-ಎಸ್.ಸುರೇಶ್ ಕುಮಾರ್
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಮಂಡಲ ಬಿಜೆಪಿ ವತಿಯಿಂದ ಶ್ರೀರಾಮಮಂದಿರ ಬಳಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಿದ ಶುಭ ದಿನದಂದು ಸಾರ್ವಜನಿಕರಿಗೆ 2000ಲಾಡುಗಳನ್ನು ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ವಿತರಿಸಿದರು.
ಇದೇ ಸಂದರ್ಧದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಶಾಮಪ್ರಸಾದ್ ಮುಖರ್ಜಿ 1952ರಲ್ಲಿ ಲೋಕಸಭೆಗೆ ಜನಸಂಘದಿಂದ ಆಯ್ಕೆಯಾಗಿದ್ದರು ಅಂದು ದೀಪ ಬೆಳಿಸಿದ್ದರು ಇಂದಿಗೆ 78ವರ್ಷಗಳ ನಂತರ ಕಮಲ ಆರಳಿದೆ.
ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವರಾದ ಅಮಿತ್ ಷಾ ರವರ ಹೋರಾಟ ಮತ್ತು ಬಾಂಗ್ಲದೇಶದ ಪಾರ್ಲಿಮೆಂಟ್ ನಲ್ಲಿ ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಬಂದರೆ ನುಸುಳಕೋರರಿಗೆ ಕಡಿವಾಣ ಬೀಳಲಿದೆ, ಅಕ್ರಮ ಬಾಂಗ್ಲದೇಶಿಗರನ್ನ ಅವರ ದೇಶಕ್ಕೆ ಕಳುಹಿಸುತ್ತಾರೆ ಇದರಿಂದ ತೊಂದರೆಯಾಗುತ್ತದೆ ಎಂದು ಪಾರ್ಲಿಮೆಂಟ್ ನಲ್ಲಿ ಚರ್ಚೆಯಾಯಿತು.
ಕಾಂಗ್ರೆಸ್ ಪಕ್ಷವನ್ನು ಬೂದುಗಾಜು ಹಾಕಿ ಹುಡುಕುವ ಪರಿಸ್ಥಿತಿ ಬಂದಿದೆ.ಬಂಗಾಳ ಬಿಜೆಪಿ ಕಾರ್ಯಕರ್ತರೆ ನಮಗೆ ಸ್ಪೂರ್ತಿಯಾಗಿದ್ದಾರೆ.ದಕ್ಷಿಣ ಭಾರತದ ಹೆಬ್ಬಾಗಿಲು ಬಿಜೆಪಿ ಪಕ್ಷಕ್ಕೆ ಕರ್ನಾಟಕವಾಗಿದೆ.ಬಿಜೆಪಿ ಪಕ್ಷ ಜನತೆಯ ಪಾರ್ಟಿ, ಅವರ ಆಶಯದಂತೆ ಪಾರ್ಟಿ ನಡೆಯುತ್ತದೆ ಮತ್ತು ಮೋದಿ ಎಂದರೆ ಸ್ಪೂರ್ತಿ, ಮೋದಿ ಎಂದರೆ ಪ್ರೇರಣೆ, ಮೋದಿ ಎಂದು ಜಯ ಎಂದು ಹೇಳಿದರು. ಮಾಜಿ ಪಾಲಿಕೆ ಸದಸ್ಯರುಗಳು, ಮಂಡಲ ಬಿಜೆಪಿ ಮತ್ತು ವಾರ್ಡ್ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
For More Updates Join our WhatsApp Group :




