ಎಲ್ಪಿಜಿ ಬೆಲೆ ಏರಿಕೆ ಪರಿಣಾಮ ಆಹಾರ ದರ ಹೆಚ್ಚಳ; ಆಟೋ ದರ ಏರಿಕೆ ಒತ್ತಡವೂ ಜೋರು.!
ಬೆಂಗಳೂರು: ನಗರದಲ್ಲಿ ಒಂದೇ ಸಮಯದಲ್ಲಿ ಹಲವು ಬದಲಾವಣೆಗಳು ಜನಸಾಮಾನ್ಯರಿಗೆ ತೀವ್ರ ಬಿಸಿ ನೀಡುತ್ತಿವೆ. ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ದರ 3,154 ರೂ.ಗೆ ಏರಿಕೆಯಾಗಿರುವ ಪರಿಣಾಮ ಹೋಟೆಲ್ ಉದ್ಯಮದಲ್ಲಿ ಆಹಾರ ಮತ್ತು ಪಾನೀಯಗಳ ದರಗಳು ಹೆಚ್ಚಳವಾಗಿವೆ. ಊಟ, ದೋಸೆ, ಕಾಫಿ-ಟೀ ದರಗಳು 5 ರಿಂದ 20 ರೂ.ವರೆಗೆ ಏರಿಕೆಯಾಗಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ಕೇಬಲ್ ದುರಸ್ತಿ ಹಾಗೂ ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಮೇ 8ರವರೆಗೆ ಬಂದ್ ಮಾಡಲಾಗಿದೆ. ಇದರ ಪರಿಣಾಮ ತುಮಕೂರು ರಸ್ತೆ, ಗೊರಗುಂಟೆಪಾಳ್ಯ ಸೇರಿದಂತೆ ಹಲವೆಡೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದೇ ವೇಳೆ ಆಟೋ LPG ದರ ಏರಿಕೆಯ ಕಾರಣ ಆಟೋ ಚಾಲಕರು ಪ್ರಯಾಣ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕನಿಷ್ಠ ದರವನ್ನು 36 ರೂ.ದಿಂದ 50 ರೂ.ಗೆ ಹೆಚ್ಚಿಸುವಂತೆ ಬೇಡಿಕೆ ಇಡಲಾಗಿದೆ. ನಗರದಲ್ಲಿ ಒಂದೇ ಸಮಯದಲ್ಲಿ ಹೋಟೆಲ್, ಸಾರಿಗೆ ಮತ್ತು ಸಂಚಾರ ಸಮಸ್ಯೆಗಳು ಜನಜೀವನಕ್ಕೆ ಒತ್ತಡ ತಂದಿವೆ.
For More Updates Join our WhatsApp Group :




