ಅನೈತಿಕ ಸಂಬಂಧ, ಮದುವೆ ನಿರಾಕರಣೆ ಹಿನ್ನೆಲೆ ದ್ವಂದ್ವ ದುರಂತ.!
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಬಳಿ ನಡೆದ ದ್ವಂದ್ವ ದುರಂತದಲ್ಲಿ ಅತಿಥಿ ಉಪನ್ಯಾಸಕಿ ಕೊಲೆಗೊಂಡ ಬಳಿಕ ಆರೋಪಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸರೋಜಾ (40) ಎಂಬ ಅತಿಥಿ ಉಪನ್ಯಾಸಕಿ ಹಾಗೂ ರಾಮಾಂಜಿ (45) ಕಳೆದ ಒಂದು ವರ್ಷದಿಂದ ಅನೈತಿಕ ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಇವರಿಬ್ಬರ ನಡುವೆ ನಂತರ ಆತ್ಮೀಯತೆ ಬೆಳೆಯಿತ್ತು.
ರಾಮಾಂಜಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದರೂ, ಸರೋಜಾ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಆತ, ಆಕೆಯನ್ನು ಲಾಂಗ್ ಡ್ರೈವ್ಗೆ ಕರೆದೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಕಾರಿಗೂ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.
ತನಿಖೆ ವೇಳೆ ಪೊಲೀಸರು ಆರೋಪಿಯ ಶವ ರೈಲಿಗೆ ತಲೆಕೊಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
For More Updates Join our WhatsApp Group :




